ಕಲಬುರಗಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಅಸಮಾದಾನವನ್ನುಂಟು ಮಾಡಿದೆ. ಆದರೆ, ಯಾರಿಗೆ ಟಿಕೆಟ್ ನೀಡಬೇಕು ಅನ್ನೋದನ್ನು ಕಮಿಟಿ ನಿರ್ಣಯ ತಗೆದುಕೊಂಡಿದೆ, ಹೊರತಾಗಿ ಯಾವುದೇ ಒಬ್ಬ ವ್ಯಕ್ತಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಮಹಾರಾಷ್ಟ್ರ ಚುನಾವಣಾ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆ: ಕೆಲವರಿಗೆ ಟಿಕೆಟ್ ಕೈ ತಪ್ಪಲು ನಾನು ಕಾರಣವಲ್ಲ- ಖರ್ಗೆ ಸ್ಪಷ್ಟನೆ - Mallikarjuna Kharge
ಮಾಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಅನೇಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ, ಆದರೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದವರು ತಮಗೆ ಟಿಕೆಟ್ ತಪ್ಪಲು ಖರ್ಗೆ ಕಾರಣ ಎನ್ನುತ್ತಿದ್ದಾರೆ ಎಂದರು
ನಗರದಲ್ಲಿ ಮಾತನಾಡಿದ ಖರ್ಗೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಅನೇಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಹಿನ್ನಲೆ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ, ಆದರೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದವರು ತಮಗೆ ಟಿಕೆಟ್ ತಪ್ಪಲು ಖರ್ಗೆ ಕಾರಣ ಎನ್ನುತ್ತಿದ್ದಾರೆ. ನನ್ನ ಉಸ್ತುವಾರಿ ಬಗ್ಗೆಯೂ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಆದರೆ, ನಾನೇ ಟಿಕೆಟ್ ತಪ್ಪಿಸಿದ್ದು ಅನ್ನೋದು ಸರಿಯಲ್ಲ, ಟಿಕೆಟ್ ಬಗ್ಗೆ ಕಮಿಟಿ ನಿರ್ಧಾರ ತಗೆದುಕೊಳ್ಳುತ್ತೆ ವಿನಃ ಯಾವುದೇ ಒಬ್ಬ ವ್ಯಕ್ತಿ ತೆಗೆದುಕೊಳ್ಳೋದಿಲ್ಲ ಎನ್ನೋದು ತಿಳಿದುಕೊಳ್ಳಬೇಕು ಎಂದು ಸಮಜಾಯಿಷಿ ನೀಡಿದರು.
ಇನ್ನು ಒಬ್ಬ ವ್ಯಕ್ತಿ ಅಸಮಾಧಾನಗೊಂಡರೆ ಎಲ್ಲರೂ ಅಸಮಾಧಾನಗೊಂಡಂತಲ್ಲ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷ ಗೆಲ್ಲಲ್ಲಿದೆ ಎಂದು ಎಐಸಿಸಿ ಕಾರ್ಯದರ್ಶಿಯೂ ಆದ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತ ಪಡಿಸಿದರು.