ಕರ್ನಾಟಕ

karnataka

ಹಸಿದ ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕುಡಚಿ ಶಾಸಕ

By

Published : May 15, 2019, 9:23 PM IST

ದಾರಿಯಲ್ಲಿ ಹಸಿದು ಕೂತ ವಾನರ ಪಡೆಯನ್ನ ಕಂಡ ಕುಡಚಿ ಶಾಸಕ ಪಿ.ರಾಜೀವ್​ ಮಾರುಕಟ್ಟೆಗೆ ಹೋಗಿ ಹಣ್ಣುಗಳನ್ನ ಖರೀದಿಸಿ ತಂದು ಕೊತಿಗಳಿಗೆ ನೀಡಿ ಮಾನವಿಯತೆ ಮೆರೆದಿದ್ದಾರೆ.

ಹಸಿದ ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕುಡಚಿ ಶಾಸಕ

ಕಲಬುರಗಿ: ವಿಪರೀತ ಬಿಸಿಲಿನ ತಾಪದಿಂದ ಆಹಾರ ನೀರು ಸಿಗದೆ ಪ್ರಾಣಿ ಸಂಕೂಲ ಕಾಡುಬಿಟ್ಟು ನಾಡಿಗೆ ಆಹಾರ ಅರಿಸಿ ಬರುತ್ತಿವೆ. ರಸ್ತೆ ಮೇಲೆ‌ ಹೋಗುವರು ತಿನ್ನಲು ಏನಾದರೂ ಕೊಟ್ಟಾರು ಅಂತ ಆಸೆಕಣ್ಣಿನಿಂದ ನೀರಿಕ್ಷಿಸುತ್ತಿವೆ. ಇದನ್ನು ಕಂಡ ಕುಡಚಿ ಶಾಸಕ ಪಿ. ರಾಜೀವ್​ ವಾನರಗಳಿಗೆ ಹಣ್ಣು ಕೊಟ್ಟು ಮಾನವೀಯತೆ ಮೇರೆದಿದ್ದಾರೆ‌.

ಹಸಿದ ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಕುಡಚಿ ಶಾಸಕ ಪಿ.ರಾಜೀವ್​

ಕಲಬುರಗಿ ಜಿಲ್ಲೆಯ ಏಕೈಕ ಬೃಹತ್ ಕಾಡು, ಅರೆ ಮಲೆನಾಡು ಎಂದು ಹೆಸರು ವಾಸಿಯಾಗಿರುವ ಚಿಂಚೋಳಿಯ ಕುಂಚಾವರಂ ಅರಣ್ಯ ಪ್ರದೇಶದಲ್ಲಿ ಈಗ ಒಣಗಿದ ಗಿಡಮರಗಳೆ ಕಾಣುತ್ತಿವೆ. ಕಾಡು ಪ್ರಾಣಿಗಳಿಗೆ ಆಹಾರದ ಕೊರತೆ ಕಂಡುಬರುತ್ತಿದೆ. ಚಿಂಚೋಳಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅವಿನಾಶ ಜಾಧವ ಪರವಾಗಿ ಪ್ರಚಾರಕ್ಕೆಂದು ಕಾಡಿನ ದಾರಿಯಲ್ಲಿ ಹೋಗುವಾಗ ಮಂಗಗಳು ರಸ್ತೆ ಬದಿಯಲ್ಲಿ ಆಹಾರಕ್ಕಾಗಿ ಪರಿತಪಿಸುವದನ್ನು ನೋಡಿದ ಶಾಸಕ ರಾಜೀವ್, ತಮ್ಮ ಕಾರನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಹಣ್ಣುಗಳನ್ನು ತಂದು ಪ್ರಾಣಿಗಳಿಗೆ ನೀಡಿ ಮಾನವಿಯತೆ ಮೇರೆದಿದ್ದಾರೆ.

ಸದ್ಯ ಕೊಂಚಾವರಂ ಕಾಡಿನಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು ಹಾಗೂ ಆಹಾರದ ಕೊರತೆ ತೆಲೆದೊರಿದ್ದು, ಪ್ರಾಣಿಗಳು ನರಕಯಾತನೆ ಅನುಭವಿಸುತ್ತಿವೆ. ಆಹಾರ, ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿವೆ. ರಸ್ತೆ ಪಕ್ಕದಲ್ಲಿ ಪ್ರಯಾಣಿಕರ ಕೈಗಳತ್ತ ನೋಡುತ್ತ ತಿನ್ನಲು ಏನಾದ್ರೂ ಸಿಕ್ಕಿತ್ತೆಂಬ ನೀರಿಕ್ಷೆಹೊತ್ತು ಕೂಡುತ್ತಿವೆ. ತಮ್ಮ ರಾಜಕೀಯ ಬ್ಯೂಸಿ ಸೇಡ್ಯೂಲ್ ನಲ್ಲಿಯೂ ಮಾರುಕಟ್ಟೆಗೆ ಹೋಗಿ ಹಣ್ಣು ತಂದು ಪ್ರಾಣಿಗಳಿಗೆ ನೀಡಿರುವ ಶಾಸಕ ಪಿ.ರಾಜೀವ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ‌. ಅಲ್ಲದೆ ಪ್ರಾಣಿಗಳಿಗೆ ಸಮರ್ಪಕ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಜನ ಆಗ್ರಹಿಸಿದ್ದಾರೆ‌.

For All Latest Updates

TAGGED:

ABOUT THE AUTHOR

...view details