ಕಲಬುರಗಿ:ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಾಯ್ತಪ್ಪಿ ಹೇಳಿಕೆ ನೀಡಿದ್ದರೆ ಕ್ಷಮೆಯಾಚಿಸಲಿ. ಇಲ್ಲಾಂದ್ರೆ ಮೋದಿ ಚಿಲ್ಲರೆ ಎಂಬುದರ ಬಗ್ಗೆ ವಿವರಣೆ ಕೊಡಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಚಿಲ್ಲರೆ ಇದ್ದಾರೆ ಅವರ ಮಾತಿಗೆ ಬೆಲೆ ಕೊಡಬೇಡಿ ಎಂಬ ಖರ್ಗೆ ಅವರ ಹೇಳಿಕೆಯನ್ನ ಖಂಡಿಸಿದ್ದಾರೆ. ಖರ್ಗೆ ಅವರ ಮೇಲೆ ತುಂಬಾ ಗೌರವ ಇದೆ. ಮೋದಿ ವಿರುದ್ಧ ಖರ್ಗೆ ಮಾತಾಡಿರೋದು ನನಗೆ ಅತ್ಯಂತ ನೋವಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಎಂದು ಸಹ ಇಷ್ಟು ಬೇಸರವಾಗಿರಲಿಲ್ಲ ಎಂದಿದ್ದಾರೆ.
ಆದರೆ ವಿಶ್ವವೇ ಮೆಚ್ಚಿದ ನಾಯಕನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೇ ಮಾತಾಡಬಾರದಿತ್ತು. ಖರ್ಗೆಯವರ ಮಾತು ಅವರಿಗೆ ಸರಿಯನಿಸಿದ್ರೆ ನಾ ಏನು ಹೇಳುವುದಿಲ್ಲ. ಖರ್ಗೆ ಅವರು ಕ್ಷಮೆ ಕೇಳಿದ್ರೆ ಅವರ ಗೌರವ ಮತ್ತಷ್ಟು ಹೆಚ್ಚಾಗಲಿದೆ ಎಂದು ಈಶ್ವರಪ್ಪ ಹೇಳಿದ್ರು.