ಕಲಬುರಗಿ :ಪ್ರವಾಹದಿಂದ 35,000 ಕೋಟಿ ರೂ. ಹಾನಿಯಾಗಿದೆ ಎಂದು ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ₹1,860 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇದು ಪರಿಹಾರ ಬಿಡುಗಡೆ ಮಾಡುವ ರೀತಿನಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಲಬುರಗಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ರೆ ಡಬಲ್ ಎಂಜಿನ್ ಸರ್ಕಾರ ಇದ್ದಂತೆ, ದೇಶ ಅಭಿವೃದ್ದಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಪರಿಹಾರ ಬಿಡುಗಡೆಯಲ್ಲಿ ಅನ್ಯಾಯ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (J) ಅಡಿಯಲ್ಲಿ ಯುವಕರಿಗೆ ಸಿಗುತ್ತಿದ್ದ ಉದ್ಯೋಗ ನಿಲ್ಲಿಸಿದ್ದಾರೆ. ವಾರ್ಷಿಕ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಒದಗಿಸಬೇಕಿದ್ದ₹1,500 ಕೋಟಿಯಲ್ಲಿ 1,134 ಕೋಟಿ ರೂ.
ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಬಿಡುಗಡೆ ಮಾಡಿದ್ದು ಕೇವಲ 250 ಕೋಟಿ ರೂ. ಮಾತ್ರ. ಇದನ್ನು ಅಭಿವೃದ್ಧಿ ಎನ್ನಬೇಕಾ? ಡಬಲ್ ಎಂಜಿನ್ ಎಲ್ಲಿದೆ? ಒಂದು ಎಂಜಿನ್ ಕೂಡ ಕೆಲಸ ಮಾಡುತ್ತಿಲ್ಲ. ಎಂಜಿನ್ ಫೇಲಾಗಿದೆ ಎಂದು ಹೇಳಿದರು.
ಒಂದಿಂಚೂ ಜಾಗ ಕೊಡಲ್ಲ..!