ಕಲಬುರಗಿ:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಾಪಿಸಲಾದ ಲೇಖಕರ ಕಟ್ಟೆಗೆ ನಾಡಿನ ಖ್ಯಾತ ಸಾಹಿತಿಗಳು, ಲೇಖಕರು ಭೇಟಿ ನೀಡುತ್ತಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಲೇಖಕರ ಕಟ್ಟೆ, ಮಾತು ಸಿಕ್ಕಾಪಟ್ಟೆ! - Kannada Literary Conference news
ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಲಾದ ಲೇಖಕರ ಕಟ್ಟೆ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ.
ಲೇಖಕರ ಕಟ್ಟೆ
ವಿಷೇಶ ಅಂದರೆ ಸಮ್ಮೇಳನದ ಅಧ್ಯಕ್ಷರಾದ ಹೆಚ್ ಎಸ್ ವೆಂಕಟೇಶಮೂರ್ತಿ ಅವರೂ ಸಹ ಲೇಖಕರ ಕಟ್ಟೆಗೆ ಭೇಟಿ ನೀಡಿ ಕೆಲ ಸಮಯ ಕಳೆದರು. ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆ ಪಕ್ಕ ಸ್ಥಾಪಿಸಲಾದ ಪುಸ್ತಕ ಮಳಿಗೆಯಲ್ಲಿ ಲೇಖಕರ ಕಟ್ಟೆ ಸ್ಥಾಪಿಸಲಾಗಿದೆ.
ಲೇಖಕರ ಕಟ್ಟೆಯಲ್ಲಿ ಖ್ಯಾತ ಹಾಗೂ ಹಿರಿಯ ಸಾಹಿತಿಗಳು, ಲೇಖಕರ ಜತೆಗೆ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಚರ್ಚೆ ನಡೆಸುವುದರೊಂದಿಗೆ ತಮ್ಮ ನೆಚ್ಚಿನ ಸಾಹಿತಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.