ಕಲಬುರಗಿ:ಜಿಲ್ಲೆಯ ಪೊಲೀಸರು ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸಿದ್ದು, ಸಂಬಂಧಿಸಿದವರಿಗೆ ವಸ್ತುಗಳನ್ನು ಹಸ್ತಾಂತರಿಸಿದರು.
ಕಲಬುರಗಿ ಪೊಲೀಸರ ಕಾರ್ಯಾಚರಣೆ: ಸಂಬಂಧಿಸಿದವರಿಗೆ ಜಪ್ತಿ ಮಾಡಿದ್ದ ವಸ್ತುಗಳ ಹಸ್ತಾಂತರ ಕಲಬುರಗಿಯ ನಗರ ವ್ಯಾಪ್ತಿಯ ಎ, ಬಿ ಹಾಗೂ ಸಿ ಡಿವಿಜನ್‌ಗಳ ಪೊಲೀಸರು ಜಪ್ತಿ ಮಾಡಿದ್ದ ವಸ್ತುಗಳನ್ನು ನಗರದ ಡಿಎಆರ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ನಡೆಸುವ ಮೂಲಕ ಸಂಬಂಧಿಸಿದವರಿಗೆ ನಗರ ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ಹಸ್ತಾಂತರಿಸಿದರು.
2018ನೇ ಸಾಲಿನಲ್ಲಿ 339 ಸ್ವತ್ತಿನ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 137 ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 3.58 ಕೋಟಿ ರೂಪಾಯಿ ಸ್ವತ್ತು ಕಳ್ಳತನವಾಗಿತ್ತು. ಈ ಪೈಕಿ 1.35 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ ಮಾಡಿ ಸ್ವತ್ತು ಫಿರ್ಯಾದಿದಾರರಿಗೆ ಹಸ್ತಾಂತರಿಸಲಾಗಿದೆ. 2019ನೇ ಸಾಲಿನಲ್ಲಿ 405 ಪ್ರಕರಣಗಳ ಪೈಕಿ 135 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 4 ಕೋಟಿ ರೂ. ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪೈಕಿ 91 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಜಪ್ತಿ ಮಾಡಿದ ವಸ್ತುಗಳನ್ನು ಹಸ್ತಾಂತರಿಸಿದ ಪೊಲೀಸರು 2020ನೇ ಸಾಲಿನಲ್ಲಿ 179 ಪ್ರಕರಣಗಳ ಪೈಕಿ 59 ಪ್ರಕರಣ ಪತ್ತೆ ಮಾಡಲಾಗಿದೆ. 3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪೈಕಿ 88 ಲಕ್ಷ ರೂ. ಮೌಲ್ಯ ವಸ್ತುಗಳು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ವಸ್ತುಗಳ ಪೈಕಿ 41 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಫಿರ್ಯಾದಿದಾರರಿಗೆ ಹಸ್ತಾಂತರಿಸಲಾಗಿದೆ.
47 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಇನ್ನೂ ಹಿಂದಿರುಗಿಸುವುದು ಬಾಕಿ ಇದೆ. ಕೊರೊನಾ ಕಾರಣದಿಂದಾಗಿ ರಿಕವರಿ ಕಡಿಮೆಯಾಗಿದೆ. ಕೋವಿಡ್ ಆತಂಕದ ನಡುವೆ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆಂದು ನಗರ ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ಹೇಳಿದರು.