ಕರ್ನಾಟಕ

karnataka

ETV Bharat / state

ಸುಲಿಗೆ ಆರೋಪದಡಿ ಆಟೋ ಚಾಲಕನ ಬಂಧನ - etv bharat

ವ್ಯಕ್ತಿಯೊಬ್ಬನನ್ನು ತಡೆದು ಸುಲಿಗೆ ಮಾಡಿದ ಆರೋಪದಡಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಕಲಬುರಗಿ: ಸುಲಿಗೆ ಆರೋಪದಡಿ ಆಟೋ ಚಾಲಕನ ಬಂಧನ

By

Published : Aug 4, 2019, 10:20 AM IST

ಕಲಬುರಗಿ: ವ್ಯಕ್ತಿಯೊಬ್ಬನನ್ನು ಸುಲಿಗೆ ಮಾಡಿದ ಆರೋಪದಡಿ ಆಟೋ ಚಾಲಕನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಎಂ.ಎಸ್.ಕೆ ಮಿಲ್ ಮೊಹಮ್ಮದಿ ಚೌಕ್ ನಿವಾಸಿ ಸೈಯದ್ ಸೋಹೆಬ್ ಪಟೇಲ್ (24) ಬಂಧಿತ ಆಟೋ ಚಾಲಕ. ಬಂಧಿತನಿಂದ ಒಂದು ದ್ವಿಚಕ್ರ ವಾಹನ, ಮೊಬೈಲ್ ಹಾಗೂ ಅಂದಾಜು 50 ಸಾವಿರ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.

ಘಟನೆಯ ವಿವರ: ಜೂನ್ 27ರ ತಡರಾತ್ರಿ ನಗರದ ಸರ್ವೋದಯ ಕಾಲೋನಿ ನಿವಾಸಿ ಸಾಯಬಣ್ಣಾ ಹೊಳಲಕರ್ ಎಂಬವರು ಬೈಕ್​​ನಲ್ಲಿ ಬರುತ್ತಿದ್ದರು. ಆಗ ಅವರನ್ನು ತಡೆದ ಆರೋಪಿ ಸೈಯ್ಯದ್ ಸೊಹೈಬ್ ಪಟೇಲ್ 5 ಸಾವಿರ ನಗದು, ಮೊಬೈಲ್, ವಾಚ್, ಎಟಿಎಂ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಸಾಯಬಣ್ಣಾ ಬ್ರಹ್ಮಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details