ಕರ್ನಾಟಕ

karnataka

ETV Bharat / state

ಲಾಕ್​ಡೌನ್​​​​​ ನಡುವೆಯೂ ಕಲಬುರಗಿಯಲ್ಲಿ ಜಾತ್ರೆ: ನಿಷೇಧಾಜ್ಞೆಗೆ ಡೋಂಟ್​​ ಕೇರ್​​ - ರಾವೂರ್ ಗ್ರಾಮಸ್ಥರು

ಕಲಬುರಗಿ ಜಿಲ್ಲೆಯನ್ನು ರೆಡ್ ಜೋನ್ ಎಂದು ಗುರುತಿಸಲಾಗಿದೆ. ಆದರೂ ರಾವೂರ್ ಗ್ರಾಮಸ್ಥರು ನಿಷೇಧಾಜ್ಞೆ ನಡುವೆಯೂ ಗ್ರಾಮದ ಸಿದ್ದಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಸಿದ್ದಾರೆ.

ಕಲಬುರಗಿಯಲ್ಲಿ ಜಾತ್ರೆ
ಕಲಬುರಗಿಯಲ್ಲಿ ಜಾತ್ರೆ

By

Published : Apr 16, 2020, 3:00 PM IST

ಕಲಬುರಗಿ:ಜಿಲ್ಲೆ ಸದ್ಯ ಕೊರೊನಾ ಹಾಟ್‌ಸ್ವಾಟ್ ಆಗಿದೆ, ಆದರೆ ಇದಕ್ಕೆ ಕ್ಯಾರೆ ಎನ್ನದ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮಸ್ಥರು ಜಾತ್ರೆ ಮಹೋತ್ಸವ ನಡೆಸಿ ನಿರ್ಲಕ್ಷ್ಯ ತೋರಿದ್ದಾರೆ.

ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕಾಗಿ ಭಾರತ್ ಲಾಕ್ ಡೌನ್ ಮಾಡಲಾಗಿದೆ. 144 ‌ನಿಷೇದಾಜ್ಞೆ ಜಾರಿಯಲ್ಲಿದೆ. ಅಲ್ಲದೆ ಯಾವುದೇ ರೀತಿಯ ಜಾತ್ರೆ, ಉರೂಸ್, ಸಭೆ, ಸಮಾರಂಭಗಳನ್ನು ನಡೆಸದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಇನ್ನೊಂದಡೆ ಸೋಂಕಿತರ ಸಂಖ್ಯೆ ಮೃತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯನ್ನು ರೆಡ್ ಜೋನ್ ಎಂದು ಗುರುತಿಸಲಾಗಿದೆ. ಆದರೂ ರಾವೂರ್ ಗ್ರಾಮಸ್ಥರು ನಿಷೇಧಾಜ್ಞೆ ನಡುವೆಯೂ ಗ್ರಾಮದ ಸಿದ್ದಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಸಿದ್ದಾರೆ.

ಲಾಕ್​ಡೌನ್​​​​​ ನಡುವೆಯೂ ಜಾತ್ರೆ ಮಾಡಿದ ಗ್ರಾಮಸ್ಥರು

ಬೆಳಿಗ್ಗೆ 6 ಗಂಟೆ ಸುಮಾರಿಗೆ ರಥೋತ್ಸವ ನೇರವೇರಿಸಿದ್ದಾರೆ. ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜಾತ್ರಾ ಮಹೋತ್ಸವದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಭಾಗಿಯಾಗಿ ರಥೋತ್ಸವ ನಡೆಸಿದ್ದಾರೆ. ರಾವೂರ್ ಗ್ರಾಮದಿಂದ ಕೇವಲ 4 ಕಿ.ಮೀ ದೂರದಲ್ಲಿ ವಾಡಿ ಪಟ್ಟಣ ಇದೆ. ಈಗಾಗಲೇ ಇಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ವಾಡಿ ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಿ ಸೀಲ್ ಡೌನ್ ಮಾಡಲಾಗಿದೆ. ಆದರೂ ರಾವೂರ್ ಜನರು ಕೊರೊನಾ ವೈರಸ್ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿ ಜಾತ್ರಾ ಮಹೋತ್ಸವ ನಡೆಸಿದ್ದಾರೆ‌.

ಕೊರೊನಾ ನಿಯಂತ್ರಣಕ್ಕೆ ಹಗಲು ರಾತ್ರಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಈ ನಡುವೆ ಜನರು ಒಂದಡೆ ಸೇರಿ ಜಾತ್ರೆ ನಡೆಸಿದ್ದಾರೆ. ಆದರೆ ಜಾತ್ರಾ ಮಹೋತ್ಸವ ತಡೆಯಬೇಕಾದ ತಾಲೂಕು ಅಧಿಕಾರ ವರ್ಗ ಸಂಪೂರ್ಣ ವಿಫಲವಾಗಿದೆ.

ABOUT THE AUTHOR

...view details