ಕಲಬುರಗಿ: ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಉತ್ತರಕರ್ನಾಟಕದಲ್ಲಿ ಜಲಪ್ರಳಯ ಉಂಟಾಗಿ ಜನ ತತ್ತರಿಸಿದ್ದಾರೆ. ನೆರೆ ಸಂತ್ರಸ್ತರ ನೆರವಿಗೆ ಇಡೀ ರಾಜ್ಯದ ಜನತೆ ಧಾವಿಸಿದೆ. ಅದರಂತೆ ಕಲಬುರಗಿ ಜಿಲ್ಲಾ ಛಾಯಾಗ್ರಾಹಕರೂ ಸಹ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಹಾಗೂ ಜಾನುವಾರಿಗೆ ಮೇವು ಪೂರೈಸಿದ್ದಾರೆ.
ಕಲಬುರಗಿಯ ಛಾಯಾಗ್ರಾಹಕರಿಂದ ನೆರೆ ಸಂತ್ರಸ್ತರಿಗೆ ನೆರೆವು.. - Jamakhandi in Bagalkot district
ಉತ್ತರ ಕರ್ನಾಟಕದ ಜನರ ಬದುಕು ಜಲಪ್ರಳಯದಲ್ಲಿ ಮೂರಾಬಟ್ಟೆಯಾಗಿದೆ. ನೆಲೆ ಕಳೆದುಕೊಂಡು ಅತಂತ್ರಗೊಂಡಿರುವ ಸಂತ್ರಸ್ತರಿಗಾಗಿ ಇಡೀ ರಾಜ್ಯದೆಲ್ಲೆಡೆಯಿಂದ ನೆರವು ಹರಿದು ಬರುತ್ತಿದೆ. ಕಲಬುರಗಿಯ ಛಾಯಾಗ್ರಾಹಕರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಠಕ್ಕಳಕಿ ಗ್ರಾಮದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದರು.
kalaburagi-photographers-helped-flood-refugees
ಕಲಬುರಗಿಯ ಛಾಯಾಗ್ರಾಹಕರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಠಕ್ಕಳಕಿ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದರು. ಅಷ್ಟೇ ಅಲ್ಲ, ಪ್ರವಾಹ ಪೀಡಿತ ರೈತರ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಲಬುರಗಿ ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಶರಣು ಭೂಸನೂರ, ರಾಜೇಶ್ ಮಹೇಂದ್ರಕರ್, ಗುಂಡೇರಾವ್ ಭೂಸನೂರ್, ನಂದಕುಮಾರ್ ಜಕನಳ್ಳಿ, ರಾಜೇಂದ್ರ ಸ್ವಾಮಿ ಅಂತುರಮಠ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.