ಕಲಬುರಗಿ:ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆಗೈದ ದುರ್ಘಟನೆ ಜಿಲ್ಲೆಯ ಗೋದುತಾಯಿ ನಗರದಲ್ಲಿ ನಡೆದಿದೆ.
ಕಲಬುರಗಿ: ಉದ್ಯಮಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ರಾಜಸ್ಥಾನ ಮೂಲದ ಟೈಲ್ಸ್ ಉದ್ಯಮಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಜಿಲ್ಲೆಯ ಗೋದುತಾಯಿ ನಗರದಲ್ಲಿ ನಡೆದಿದೆ.
ಉದ್ಯಮಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು
ಸುನೀಲ್ ರಂಕಾ (42) ಗುಂಡೇಟಿಗೆ ಬಲಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾಜಸ್ಥಾನ ಮೂಲದ ಸುನೀಲ್ ಟೈಲ್ಸ್ ವ್ಯಾಪಾರಿಯಾಗಿದ್ದು, ಇಲ್ಲಿನ ಗೋದುತಾಯಿ ನಗರದ ಮನೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದ. ಮನೆ ಮುಂದೆ ನಿಂತಿದ್ದಾಗ ಸ್ಕೂಟಿಯಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸುನೀಲ್ ಎದೆಗೆ ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ಭೇಟಿ ನೀಡಿದ್ದಾರೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬಿಸಲಾಗಿದೆ.