ಕಲಬುರಗಿ: ರೈತರು ಬೆಳೆದ ಧವಸ ಧಾನ್ಯ, ಹಣ್ಣು, ತರಕಾರಿಯನ್ನು ಬೆಳೆದ ಸ್ಥಳದಲ್ಲಿಯೇ ಖರೀದಿಸುವಂತೆ ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೃಷಿ ಉತ್ಪನ್ನಗಳನ್ನು ಬೆಳೆದ ಸ್ಥಳದಲ್ಲಿಯೇ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚನೆ - ಲಾಕ್ ಡೌನ್ ಮಾಡಿರುವ ಕಾರಣ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ರೈತರಿಗೆ ತೊಂದರೆ
ಲಾಕ್ ಡೌನ್ ಮಾಡಿರುವ ಕಾರಣ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ರೈತರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ರೈತರು ಬೆಳೆದ ಉತ್ಪನ್ನಗಳನ್ನು ಸ್ಥಳದಲ್ಲಿಯೇ ಖರೀದಿಸುವಂತೆ ಸೂಚನೆ ನೀಡಲಾಗಿದೆ.
meeting
ಅಧಿಕಾರಿಗಳ ಸಭೆ ನಡೆಸಿ ಮಾತಾಡಿದ ಪ್ರಸಾದ್, ಕೊರೊನಾ ನಿಯಂತ್ರಣಕ್ಕೆ ಭಾರತ್ ಲಾಕ್ ಡೌನ್ ಮಾಡಿರುವ ಕಾರಣ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ರೈತರಿಗೆ ತೊಂದರೆ ಆಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಹೀಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ವಾಹನಗಳನ್ನು ಬಳಸಿಕೊಂಡು ರೈತರ ಜಮೀನಿಗೆ ಹೋಗಿ ರೈತರು ಬೆಳೆದಿರುವ ಧವಸ, ಧಾನ್ಯ, ತರಕಾರಿ, ಹಣ್ಣುಗಳನ್ನು ಖರೀದಿ ಮಾಡಿ, ಜಿಲ್ಲೆಗೆ ಅಗತ್ಯ ಇರುವಷ್ಟು ಬಿಟ್ಟು, ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ರಫ್ತು ಮಾಡುವಂತೆ ಸೂಚನೆ ನೀಡಿದ್ದಾರೆ.