ಕರ್ನಾಟಕ

karnataka

ETV Bharat / state

ಬಿಸಿಲಿಗೆ ಬಸವಳಿದ ಕಲಬುರಗಿ... ಮಣ್ಣಿನ ಮಡಿಕೆಗೆ ಭಾರಿ ಡಿಮ್ಯಾಂಡ್

ಮಡಿಕೆಗಳನ್ನು ಹೊರ ರಾಜ್ಯ ರಾಜಸ್ಥಾನ ಹಾಗೂ ಮಹಾರಾಷ್ಟ್ರದಿಂದ ತಂದು ಮಾರಾಟ ಮಾಡುತ್ತೇವೆ. ಪ್ರತಿ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಕಲಬುರಗಿಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಜನ ಹೆಚ್ಚು ಮಡಿಕೆ ಖರೀದಿ ಮಾಡುತ್ತಿದ್ದಾರೆ ಎಂದು ಮಡಿಕೆ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

By

Published : Mar 24, 2019, 7:59 PM IST

ಮಣ್ಣಿನ ಮಡಿಕೆ ಮಾರಾಟ

ಕಲಬುರಗಿ:ಕಲಬುರಗಿಯಲ್ಲಿ ಬಿಸಿಲಿನ ಕಾವು ಜೋರಾಗಿದೆ. ಬೇಸಿಗೆ ಪ್ರಾರಂಭದಲ್ಲೇ ಅತಿ ಹೆಚ್ಚು ಬಿಸಿಲು ಇರುವುದರಿಂದ ಜಿಲ್ಲೆಯ ಜನ ಬಸವಳಿದು ಬಿಸಿಲಿನ ತಾಪದಿಂದ ದಣಿವರಿಸಿಕೊಳ್ಳಲು ಮಣ್ಣಿನ ಮಡಿಕೆಯ ತಂಪು ನೀರಿನ ಮೊರೆ ಹೋಗುತ್ತಿದ್ದಾರೆ.

ಹೌದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಬಿಸಿಲಿಗೆ ಪ್ರಸಿದ್ಧವಾದ ಪ್ರದೇಶ. ವರ್ಷದ ಹತ್ತು ತಿಂಗಳು ಇಲ್ಲಿ ಬಿಸಿಲೇ ಇರೊತ್ತೆ. ಅಂತಹದರಲ್ಲಿ ಈ ಬಾರಿ ಬೇಸಿಗೆ ಬಿಸಿಲಿನ ಜಳ ಜೋರಾಗಿಯೇ ಕಾಣಿಸುತ್ತಿದೆ. ಬೇಸಿಗೆ ಪ್ರಾರಂಭದಲ್ಲಿಯೇ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದು, ಮುಂಬರುವ ದಿನಳಲ್ಲಿ 42 ಡಿಗ್ರಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಿಸಿಲಿಗೆ ಕಲಬುರಗಿ ಜನ ಬೇಸತ್ತು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳಮೋರೆ ಹೋಗುತ್ತಿದ್ದಾರೆ. ಅದರಲ್ಲೂ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಮಡಿಕೆಗೆ ಬಾರಿ ಬೇಡಿಕೆ ಬಂದಿದೆ.

ಮಣ್ಣಿನ ಮಡಿಕೆ ಮಾರಾಟ

ಕಪ್ಪು ಹಾಗೂ ಕೆಂಪು ಮಣ್ಣಿನಿಂದ ತಯಾರಾದ ಮಣ್ಣಿನ ಮಡಿಕೆಯ ವ್ಯಾಪಾರದ ಭರಾಟೆ ಜೋರಾಗಿದೆ. ಇಲ್ಲಿನ ಶರಣಬಸವೇಶ್ವರ ದೇವಸ್ಥಾನ ಎದುರಿಗೆ ಮಾರಾಟಕಿಟ್ಟಿರುವ ಮಣ್ಣಿನ ಮಡಿಕೆ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ತಂಪು ಪಾನೀಯಗಳಮೊರೆ ಹೋಗುವುದನ್ನು ಬಿಟ್ಟು, ನೈಸರ್ಗಿಕವಾಗಿ ತಯಾರಿಸಲ್ಪಡುವ ಮಣ್ಣಿನ ಮಡಿಕೆಗಳತ್ತ ಜನ ಮುಖ ಮಾಡಿದ್ದಾರೆ. ಮಾರುಕಟ್ಟೆಗೆ ಬಂದು ತಮಗೆ ಇಷ್ಟವಾದ ಕಪ್ಪು ಮತ್ತು ಕೆಂಪು ಮಣ್ಣಿನಿಂದ ಮಾಡಿದ ಮಣ್ಣಿನ ಮಡಿಕೆಯನ್ನು ಖರೀದಿ ಮಾಡುತ್ತಿದ್ದಾರೆ.

ಮಡಿಕೆಗಳನ್ನುಹೊರ ರಾಜ್ಯ ರಾಜಸ್ಥಾನ ಹಾಗೂ ಮಹಾರಾಷ್ಟ್ರದಿಂದ ತಂದು ಮಾರಾಟ ಮಾಡುತ್ತೇವೆ. ಪ್ರತಿ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಕಲಬುರಗಿಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಜನ ಹೆಚ್ಚು ಮಡಿಕೆ ಖರೀದಿ ಮಾಡುತ್ತಿದ್ದಾರೆ ಎಂದು ಮಡಿಕೆ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಅನಾದಿ ಕಾಲದಿಂದಲೂ ಬಳಕೆಯಾಗುತ್ತಿರುವ ಬಡವರ ಫ್ರಿಡ್ಜ್ ಮಣ್ಣಿನ ಮಡಿಕೆಗೆ ಭಾರಿ ಬೇಡಿಕೆ ಕುದುರಿದ್ದು, ಮಣ್ಣಿನ ಮಡಿಕೆಯ ತಂಪು ನೀರು ಸೇವಿಸುವುದರಿಂದ ದಾಹ ತಿರಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಹೆಚ್ಚು ಉಪಯುಕ್ತವಾಗಲಿದೆ. ಫ್ರೀಜ್ ನೀರು ಕುಡಿಯುವರಿಂದ ಗಂಟಲು ನೋವು ಬರುತ್ತದೆ. ಆದರೆ ಮಡಿಕೆಯಲ್ಲಿನ ನೀರು ಸೇವಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ. ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸುವುದರಿಂದ ದೇಹ ಮತ್ತು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ ಎನ್ನುತ್ತಾರೆ ಮಡಿಕೆ ಖರೀದಿಸುವ ಗ್ರಾಹಕರು.

ABOUT THE AUTHOR

...view details