ಕರ್ನಾಟಕ

karnataka

ವಲಸಿಗರಲ್ಲಿ ಕೊರೊನಾ ನೆಗೆಟಿವ್ ಬಂದರೆ ಹೋಮ್ ಕ್ವಾರಂಟೈನ್: ಸಂಸದ ಉಮೇಶ್ ಜಾಧವ್

By

Published : May 21, 2020, 11:39 PM IST

ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ವಲಸಿಗರಲ್ಲಿ ಕೊರೊನಾ ನೆಗೆಟಿವ್ ಕಂಡು ಬಂದರೆ ಅಂತವರನ್ನು ಕ್ವಾರಂಟೈನ್ ಕೇಂದ್ರದ ಬದಲಾಗಿ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ.

Umesh Jadhav
ಸಂಸದ ಡಾ.ಉಮೇಶ್ ಜಾಧವ್

ಕಲಬುರಗಿ: ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿ ಜಿಲ್ಲೆಯ ವಿವಿಧ ಕ್ವಾರಂಟೈನ್​ ಕೇಂದ್ರದಲ್ಲಿರುವ ವಲಸಿಗರಲ್ಲಿ ಕೊರೊನಾ ನೆಗೆಟಿವ್ ಬಂದಿರುವ ಕಾರ್ಮಿಕರನ್ನು ಅವರವರ ಮನೆಗಳಿಗೆ ಕಳುಹಿಸಿ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಪಾಂಡೆ ಅವರು ಈಗಾಗಲೇ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಜಾಧವ್ ತಿಳಿಸಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರುವವರಲ್ಲಿ ಪಾಸಿಟಿವ್ ಬಂದರೆ ಇಎಸ್ಐಸಿ ಮತ್ತು ಜಿಮ್ಸ್ ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗೆಟಿವ್ ವರದಿ ಬಂದಿರುವವರು ಮನೆಗೆ ತೆರಳಬಹುದು. ಆದರೆ, ಆರೋಗ್ಯ ಇಲಾಖೆ ಸೂಚಿಸಿರುವಷ್ಟು ದಿನಗಳು ಕಡ್ಡಾಯವಾಗಿ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು. ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ವಲಸಿಗರಿಗೆ ಸಲಹೆ ನೀಡಲಾಗಿದೆ.

ಆದ್ರೆ ವಲಸೆ ಕಾರ್ಮಿಕರಿಂದ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ. ಹೀಗಿರುವಾಗ ಅವರನ್ನು ಮನೆಗೆ ಬಿಟ್ಟು ಕಳುಸಿದರೆ ಮತ್ತಷ್ಟು ಸೋಂಕು ಹೆಚ್ಚಾಗಬಹುದೆಂಬ ಆತಂಕವನ್ನು ಜಿಲ್ಲೆಯ ಜನರು ವ್ಯಕ್ತ ಪಡಿಸುತ್ತಿದ್ದಾರೆ.

ABOUT THE AUTHOR

...view details