ಸೇಡಂ: ತಿಂಗಳಲ್ಲೇ ಸತತ ಮೂರನೇ ಬಾರಿ ತಾಲೂಕಿನ ಮಳಖೇಡದ ರಾಜ್ಯ ಹೆದ್ದಾರಿ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಸೇಡಂನಲ್ಲಿ ಮುಂದುವರೆದ ಮಳೆ ಅಬ್ಬರ: ಮೂರನೇ ಬಾರಿ ಮುಳುಗಿದ ಮಳಖೇಡ ಬ್ರಿಡ್ಜ್
ಸೇಡಂ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದ್ದು, ಬ್ರಿಡ್ಜ್ ಮೇಲೆ ಸೊಂಟದೆತ್ತರಕ್ಕೆ ನೀರು ಹರಿಯುತ್ತಿದೆ. ಇದರಿಂದ ಕಲಬುರಗಿ, ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್ ಮಾಡಲಾಗಿದೆ.
ಮಳಖೇಡ ಬ್ರಿಡ್ಜ್
ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದ್ದು, ಬ್ರಿಡ್ಜ್ ಮೇಲೆ ಸೊಂಟದೆತ್ತರಕ್ಕೆ ನೀರು ಹರಿಯುತ್ತಿದೆ. ಇದರಿಂದ ಕಲಬುರಗಿ, ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್ ಮಾಡಲಾಗಿದೆ.
ಶುಕ್ರವಾರ ಇಡೀ ರಾತ್ರಿ ಬಿಡದೆ ಮಳೆ ಸುರಿದಿದ್ದು, ಬಹುತೇಕ ನದಿಗಳು ಭರ್ತಿಯಾಗಿವೆ. ಇದರಿಂದ ವಾಹನ ಮತ್ತು ಜನ ಸಂಚಾರಕ್ಕೆ ಅಡ್ಡಿಯಾಗಿದೆ.