ಕಲಬುರಗಿ:ಎಲ್ಲೆಡೆ ಜನರು ಕೊರೊನಾಗೆ ಹೆದರಿ ನಡುಗುತ್ತಿದ್ದಾರೆ. ರಾಜ್ಯದ ಕೊರೊನಾ ಹಾಟ್ಸ್ಪಾಟ್ ಕಲಬುರಗಿಯಲ್ಲಿ ಭಾರೀ ಮಳೆ ಸುರಿದು ಮನೆಗಳಿಗೆ ನೀರು ನುಗ್ಗಿರುವುದರಿಂದ ಜನರು ಮತ್ತಷ್ಟು ಭಯಭೀತರಾಗಿದ್ದಾರೆ. ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಸುರಿದ ಮಳೆಯಿಂದಾಗಿ ಹಲವೆಡೆ ಮನೆಗಳಲ್ಲಿ ನೀರು ಹೊಕ್ಕು ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೊರೊನಾ ಹಾಟ್ಸ್ಪಾಟ್ ಕಲಬುರಗಿಯಲ್ಲಿ ಭಾರೀ ಮಳೆ...ಮನೆಗಳಿಗೆ ನುಗ್ಗಿದ ನೀರು
ಕೊರೊನಾದಿಂದ ಭಯಭೀತರಾಗಿರುವ ಕಲಬುರಗಿ ಜನರು ಇದೀಗ ಮಳೆಗೆ ಹೆದರುವಂತಾಗಿದೆ. ಶಾಹಬಾದ್ ಹಾಗೂ ಇನ್ನಿತರ ಕಡೆ ಸುರಿದ ಭಾರೀ ಮಳೆಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಿ ಜನರು ಮತ್ತಷ್ಟು ಕಷ್ಟ ಪಡುವಂತಾಗಿದೆ.
ಸುಮಾರು 40 ನಿಮಿಷಗಳ ಕಾಲ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಕಲಬುರಗಿ ನಗರ ಶಾಹಬಾದ್ನಲ್ಲಿ ಹಲವೆಡೆ ಮನೆಗಳಿಗೆ ನೀರು ಹೊಕ್ಕಿದೆ. ಇನ್ನು ಕೆಲವೆಡೆ ಮರ, ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೊರೊನಾ ಭೀತಿಯಲ್ಲಿ ಜೀವನ ಸಾಗಿಸುತ್ತಿರುವ ಕಲಬುರಗಿಯ ಜನರನ್ನು ಈ ಮಳೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಅಗತ್ಯ ಸಾಮಗ್ರಿಗಳ ಖರೀದಿಗೆ ಹೊರಗೆ ಹೋಗಲಾರದೆ ಮನೆಯಲ್ಲೇ ಹೇಗೋ ಜೀವನ ಸಾಗಿಸೋಣ ಎಂದುಕೊಂಡವರಿಗೆ ಈ ಮಳೆಯಿಂದ ಮನೆಯಲ್ಲೂ ನೆಮ್ಮದಿಯಾಗಿ ಇರಲಾರದಂಥ ಪರಿಸ್ಥಿತಿ ಎದುರಾಗಿದೆ. ಕೊರೊನಾ ವೈರಸ್ ಭೀತಿ ನಡುವೆ ಚರಂಡಿ ನೀರು ಮನೆಗಳಿಗೆ ನುಗ್ಗಿರುವುದರಿಂದ ಬೇರೆ ಯಾವುದಾದರೂ ಕಾಯಿಲೆ ಬಂದರೇನು ಗತಿ ಎಂದು ಚಿಂತಿಸುವ ಸ್ಥಿತಿ ಎದುರಾಗಿದೆ. ಮನೆಯೊಳಗೆ ನುಗ್ಗಿರುವ ನೀರನ್ನು ಈಗ ಹೊರಗೆ ಚೆಲ್ಲುವುದು ಕೂಡಾ ಸವಾಲಾಗಿದೆ.