ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಧಾರಾಕಾರ ಮಳೆ: ಕಾಗಿಣಾ ನದಿ ಸೇತುವೆ ಮತ್ತೆ ಮುಳುಗಡೆ - ಕಲಬುರಗಿಯಲ್ಲಿ ಧಾರಾಕಾರ ಮಳೆ

ಮಳೆಯಿಂದಾಗಿ ಮತ್ತೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರ ಕಡಿತಗೊಂಡಿದೆ. ಈ ಹಿನ್ನೆಲೆ ಕಲಬುರಗಿಗೆ ತೆರಳಲು ಪರ್ಯಾಯವಾಗಿ ಶಹಾಬಾದ್​ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.

heavy-rain-fall-in-part-of-kalburgi-kagina-bridge-submerged
ಕಲಬುರಗಿಯಲ್ಲಿ ಧಾರಾಕಾರ ಮಳೆ: ಕಾಗೀಣಾ ನದಿ ಸೇತುವೆ ಮತ್ತೆ ಮುಳುಗಡೆ

By

Published : Sep 17, 2020, 12:42 PM IST

ಸೇಡಂ (ಕಲಬುರಗಿ): ಭಾರಿ ಮಳೆಯಿಂದ ಕಲಬುರಗಿಗೆ ಸಂಪರ್ಕ ಕಲ್ಪಿಸುವ ಮಳಖೇಡ ಗ್ರಾಮದ ಕಾಗಿಣಾ ನದಿ ಸೇತುವೆ ಮತ್ತೆ ಮುಳುಗಡೆಯಾಗಿದೆ. ಕಳೆದೆರಡು ದಿನದ ಹಿಂದೆಯಷ್ಟೇ ಪ್ರವಾಹದಿಂದ ಸೇತುವೆ ಮುಳುಗಡೆಯಾಗಿತ್ತು. ಬಳಿಕ ಪ್ರವಾಹ ಇಳಿಮುಖವಾಗಿ ಸಂಚಾರಕ್ಕೆ ಮುಕ್ತವಾಗಿತ್ತು.

ಮಳೆಯಿಂದಾಗಿ ಮುಳುಗಡೆಯಾಗಿರುವ ಕಾಗಿಣಾ ಸೇತುವೆ

ಇದೀಗ ಮತ್ತೆ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಕಡಿತಗೊಂಡಿದೆ. ಈ ಹಿನ್ನೆಲೆ ಕಲಬುರಗಿಗೆ ತೆರಳಲು ಪರ್ಯಾಯವಾಗಿ ಶಹಾಬಾದ್​ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.

ಅಲ್ಲದೆ ತಾಲೂಕಿನ ಹೆಡ್ಡಳ್ಳಿ ತೆಲ್ಕೂರ ಮತ್ತು ಬಿಬ್ಬಳ್ಳಿ ಬ್ರಿಡ್ಜ್ ಸಹ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಇದರಿಂದ ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿದ್ದು, ನದಿ ಪಾತ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ABOUT THE AUTHOR

...view details