ಕರ್ನಾಟಕ

karnataka

ETV Bharat / state

ಮುತ್ತಿಮೂಡ್ ಪತ್ನಿ ವಿರುದ್ಧ ಬೆಟ್ಟಿಂಗ್ ಆರೋಪದ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡ ಇದೆ: ಗುತ್ತೆದಾರ್ ಆರೋಪ

ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಯಶ್ರೀ ಮತ್ತಿಮೂಡ್ ಅವರ ಹೆಸರು ಎಫ್​ಐಆರ್ ನಲ್ಲಿ ಸೇರಿಸಲಾಗಿದೆ. ಇದರ ಹಿಂದೆ ಶಾಸಕ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲೆಯಲ್ಲಿ ತಾವೇ ಬೆಳೆಯಬೇಕು ಎಂಬ ದುರುದ್ದೇಶವಿದೆ. ಜಿಲ್ಲೆಯಲ್ಲಿ ಅನೇಕ ಶಾಸಕರನ್ನು ಇದೆ ರೀತಿ ಒತ್ತೆಯಿಟ್ಟಿದ್ದಾರೆ ಎಂದು ಗುತ್ತೆದಾರ್ ಆಕ್ರೋಶ ವ್ಯಕ್ತಪಡಿಸಿದರು.

guttedar-talk-about-betting-allegations-
ಗುತ್ತೆದಾರ್ ಆರೋಪ

By

Published : Nov 17, 2020, 4:33 PM IST

Updated : Nov 17, 2020, 5:00 PM IST

ಕಲಬುರಗಿ: ಶಾಸಕ ಬಸವರಾಜ ಮುತ್ತಿಮೂಡ್ ಅವರ ಪತ್ನಿ ವಿರುದ್ಧ ಬೆಟ್ಟಿಂಗ್ ಆರೋಪದ ಹಿಂದೆ ಶಾಸಕ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ್ ಆರೋಪ ಮಾಡಿದ್ದಾರೆ.

ಗುತ್ತೆದಾರ್ ಆರೋಪ

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಪತ್ನಿ ವಿರುದ್ದ ಕೇಳಿ ಬಂದಿರುವ ಬೆಟ್ಟಿಂಗ್ ಆರೋಪ ಕುರಿತು ಪ್ರತಿಕ್ರಿಯಿಸಿರುವ ಗುತ್ತೆದಾರ್, ಮತ್ತಿಮೂಡ್ ಅವರ ಅಭಿವೃದ್ಧಿ ಕೆಲಸ ಸಹಿಸಲಾಗದೆ ಅವರ ವಿರುದ್ಧ ಸುಖಾಸುಮ್ಮನೆ ಇಲ್ಲಸಲ್ಲದ ಆರೋಪ‌ ಮಾಡಲಾಗುತ್ತಿದೆ. ಶಾಸಕರ ಪತ್ನಿ ಅವರ ತಂದೆ-ತಾಯಿ ಮನೆಗೆ ಹೋದಾಗ ಮನೆ ಮುಂದೆ ನಿಲ್ಲಿಸಿದ ಕಾರು ಜಪ್ತಿ‌‌ ಮಾಡಲಾಗಿದೆ.

ಮಹಾರಾಷ್ಟ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣೆದು ಮತ್ತಿಮೂಡ್ ಅವರಿಗೆ ಕಿರುಕುಳ ನೀಡಿದರೆ ಸಹಿಸುವುದಿಲ್ಲ. ಇದರ ಹಿಂದೆ ಶಾಸಕ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲೆಯಲ್ಲಿ ತಾವೇ ಬೆಳೆಯಬೇಕು ಎಂಬ ದುರುದ್ದೇಶವಿದೆ. ಜಿಲ್ಲೆಯಲ್ಲಿ ಅನೇಕ ಶಾಸಕರನ್ನು ಇದೆ ರೀತಿ ಒತ್ತೆಯಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ, ನಿಮ್ಮ ಕ್ಷೇತ್ರ ನೀವು ನೋಡಿಕೊಳ್ಳಿ ಅವರ ಕ್ಷೇತ್ರ ಅವರು ನೋಡಿಕೊಳ್ಳುತ್ತಾರೆ ಎಂದು ಗುತ್ತೆದಾರ್ ಗುಡುಗಿದ್ದಾರೆ. ಇನ್ನೂ ಮಹಾರಾಷ್ಟ್ರ ಸರ್ಕಾರದ ರಾಜಕೀಯ ಒತ್ತಡಕ್ಕೆ ಮಣೆದು ಮತ್ತಿಮೂಡ್ ಅವರಿಗೆ ಕಿರುಕುಳ ನೀಡಿದರೆ ಸಹಿಸುವುದಿಲ್ಲ. ಮಹಾ ಸರ್ಕಾರದ ವಿರುದ್ದ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Last Updated : Nov 17, 2020, 5:00 PM IST

ABOUT THE AUTHOR

...view details