ಕರ್ನಾಟಕ

karnataka

ETV Bharat / state

ಗುಲ್ಬರ್ಗ ವಿ.ವಿ ಯಡವಟ್ಟು: ಪರೀಕ್ಷೆಯ ಪ್ರಶ್ನೆಪತ್ರಿಕೆ ಮುಂಚಿತವಾಗಿಯೇ ಹಂಚಿದ ಶಿಕ್ಷಕರು!

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬಿ.ಎಡ್​ ವಿದ್ಯಾರ್ಥಿಗಳಿಗೆ ನಾಳೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಂದೇ ವಿದ್ಯಾರ್ಥಿಗಳ ಕೈಸೇರಿದ್ದು, ವಿವಿ ಯಡವಟ್ಟು ಮಾಡಿಕೊಂಡಿದೆ.

Exam Question paper
ಗುಲ್ಬರ್ಗ ವಿವಿ ಯಡವಟ್ಟು

By

Published : Mar 6, 2020, 8:04 PM IST

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಾಳೆ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಂದೇ ವಿದ್ಯಾರ್ಥಿಗಳ ಕೈ ಸೇರಿದ್ದು, ವಿವಿ ಮತ್ತೊಂದು ಯಡವಟ್ಟಿಗೆ ಗುರಿಯಾಗಿದೆ.

ಗುಲ್ಬರ್ಗ ವಿವಿ ಯಡವಟ್ಟು

ಬಿ.ಎಡ್​ ವಿದ್ಯಾರ್ಥಿಗಳಿಗೆ ಸಸ್ಯಶಾಸ್ತ್ರ ಮತ್ತು ಗಣಿತದ ಮೆಥಡ್-2 ಪರೀಕ್ಷೆ ಇಂದು ನಡೆಯಬೇಕಿತ್ತು. ಈ ವೇಳೆ ಮೆಥಡ್-2ರ ಪ್ರಶ್ನೆ ಪತ್ರಿಕೆ ಬದಲು ಮೆಥಡ್-1 ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ. ನಾಳೆ ಬರೆಯಬೇಕಿದ್ದ ಪ್ರಶ್ನೆ ಪತ್ರಿಕೆ ಇಂದೇ ಕೈ ಸೇರಿದ್ದಕ್ಕೆ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ. ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ತಂದ ಮೇಲೆ ಪ್ರಮಾದ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ತಕ್ಷಣ ವಿದ್ಯಾರ್ಥಿಗಳಿಂದ ಪ್ರಶ್ನೆ ಪತ್ರಿಕೆ ಮರಳಿ ಪಡೆದು ಇಂದು ನಿಗದಿಯಾಗಿದ್ದ ಮೆಥೆಡ್ 2 ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ.

ಗುಲ್ಬರ್ಗ ವಿವಿ ಯಡವಟ್ಟು

ಕಲಬುರಗಿ, ಬೀದರ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಪ್ರಶ್ನೆಪತ್ರಿಕೆ ಬಹಿರಂಗ, ಪರೀಕ್ಷಾ ನಕಲು ಇತ್ಯಾದಿಗಳ ಕಾರಣದಿಂದಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇದೆ.

ABOUT THE AUTHOR

...view details