ಕಲಬುರಗಿ: ನಗರದಲ್ಲಿ ಇಂದು ಫ್ರೆಂಡ್‌ಶಿಪ್ ಡೇ ಸಂಭ್ರಮ ಜೋರಾಗಿಯೇ ನಡೆದಿದ್ದು, ಹಲವು ಅಂಗಡಿಗಳು ಫ್ರೆಂಡ್‌ಶಿಪ್ ಬ್ಯಾಂಡ್ಗಳಿಂದ ತುಂಬಿ ಹೋಗಿದ್ದವು.
ಕಲಬುರಗಿಯಲ್ಲಿ ಯುವ ಸಮೂಹದಿಂದ ಫ್ರೆಂಡ್‌ಶಿಪ್ ಡೇ ಆಚರಣೆ - friendship day
ಕಲಬುರಗಿಯಲ್ಲಿ ಯುವ ಸಮೂಹ ಸ್ನೇಹಿತರ ಕೈಗೆ ಬ್ಯಾಂಡ್ ಕಟ್ಟುವ ಮೂಲಕ ವಿಶೇಷವಾಗಿ, ಫ್ರೆಂಡ್‌ಶಿಪ್ ಡೇ ಆಚರಿಸಿದರು.
ನಗರದ ಹಲವು, ಪುಸ್ತಕ ಮಳಿಗೆಗಳಲ್ಲಿ ಸ್ಟೋರ್ ಗಳಲ್ಲಿ ವಿಧ ವಿಧವಾದ ಬಣ್ಣ ಬಣ್ಣದ ಬ್ಯಾಂಡ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಬ್ಯಾಂಡ್‌ಗಳನ್ನು ಖರೀದಿಸಲು ಮಕ್ಕಳು, ಯುವಕ, ಯುವತಿಯರು ಹಾಗೂ ವಿದ್ಯಾರ್ಥಿಗಳು ಸ್ಟೋರ್ಗಳಿಗೆ ಆಗಮಿಸಿ ತಮ್ಮ ನೆಚ್ಚಿನ ಸ್ನೇಹಿತರಿಗಾಗಿ ಮಾರಾಟಕ್ಕೆ ಇಟ್ಟಿದ್ದ, ಫ್ರೆಂಡ್ಸ್ ಇಸ್ ಫಾರ್ ಎವರ್, ಬೆಸ್ಟ್ ಫ್ರೆಂಡ್, ಐ ಮಿಸ್ ಯೂ ಫ್ರೆಂಡ್, ಡಿಯರ್ ಫ್ರೆಂಡ್ ಎಂದು ಬರೆದಿರುವ ಹತ್ತು ಹಲವು ಆಕರ್ಷಕ ಬ್ಯಾಂಡ್ಗಳಲ್ಲಿ ತಮಗಿಷ್ಟವಾದ ಫ್ರೆಂಡ್‌ಶಿಪ್ ಬ್ಯಾಂಡ್‌ಗಳನ್ನು ಕೊಂಡ್ಯೊಯ್ದು, ಸ್ನೇಹಿತರ ಕೈಗೆ ಕಟ್ಟಿ ಶುಭಾಶಯ ವಿನಿಮಯ ಮಾಡಿ ವಿಶ್ವ ಸ್ನೇಹಿತರ ದಿನವನ್ನು ಆಚರಿಸಿದರು.
ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದ ದಿನದಂದು ಆಚರಿಸುವ ಫ್ರೆಂಡ್‌ಶಿಪ್ ಡೇಯನ್ನು ಕಲಬುರಗಿಯಲ್ಲಿ ಮಕ್ಕಳು, ಯುವ ಸಮೂಹ ಸಂಭ್ರಮದಿಂದ ಆಚರಿಸಿದರು.