ಕಲಬುರಗಿ: ಅಕ್ಟೋಬರ್ 24ರಂದು ಅಫಜಲಪುರದ ಕೋಲಿ ಸಮಾಜದ ಮುಖಂಡ ದುಂಡಪ್ಪ ಜಮಾದರ್ ಮೇಲೆ ನಗರದ ಚೌಕ್ ಠಾಣೆ ಸಿಪಿಐ ಎಸ್.ಆರ್.ನಾಯಕ್ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದೆ.
ಕೋಲಿ ಸಮಾಜದ ಮುಖಂಡನಿಗೆ ಹಲ್ಲೆ: ಕಲಬುರಗಿಯಲ್ಲಿ ನಾಲ್ವರು ಕಾನ್ಸ್ಟೇಬಲ್ ಸಸ್ಪೆಂಡ್ - ಕಲಬುರಗಿಯಲ್ಲಿ ಕಾನ್ಸ್ಟೇಬಲ್ಗಳ ಅಮಾನತು
ಅಕ್ರಮ ಆಯುಧ ಹೊಂದಿದ್ದ ಆರೋಪದಡಿ ದುಂಡಪ್ಪ ಜಮಾದರ್ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನೆಪದಲ್ಲಿ ಸಿಪಿಐ ನಾಯಕ್ ಮತ್ತು ಸಿಬ್ಬಂದಿ ಥಳಿಸಿದ್ದಾರೆಂದು ಆರೋಪಿಸಿ, ಅನೇಕ ಸಂಘಟನೆಗಳು ನಾಯಕ್ ಮತ್ತು ಸಿಬ್ಬಂದಿ ಅಮಾನತಿಗೆ ಆಗ್ರಹಿಸಿದ್ದರು.
ಚೌಕ್ ಪೊಲೀಸ್ ಠಾಣೆ
'ಹಲ್ಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾನ್ಸ್ಸ್ಟೇಬಲ್ಗಳಾದ ರಾಜಕುಮಾರ, ಉಮೇಶ್, ಕೇಶವರಾವ್, ಅಶೋಕ್ ಅವರನ್ನು ಅಮಾನತು ಮಾಡಲಾಗಿದ್ದು, ಚೌಕ್ ಠಾಣೆ ಸಿಪಿಐ ಎಸ್.ಆರ್.ನಾಯಕ್ ಅವರ ವಿರುದ್ಧ ನಿಯಮ 7ರ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ' ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್ ಹೇಳಿದ್ದಾರೆ.