ಕರ್ನಾಟಕ

karnataka

ETV Bharat / state

ಚಿತ್ತಾಪುರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಮಾಜಿ ಶಾಸಕ ವಿಶ್ವನಾಥ್ ಹೆಬ್ಬಾಳ, ಅರವಿಂದ್​ ಚವ್ಹಾಣ್ ರಾಜೀನಾಮೆ - ex mla vishwanath hebbal

ಚಿತ್ತಾಪುರ ಕ್ಷೇತ್ರದಲ್ಲಿ ಮಣಿಕಂಠ ರಾಠೋಡ್​​ ಅವರಿಗೆ ಟಿಕೆಟ್ ನೀಡಿದಕ್ಕೆ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ.

Vishwanath Patil Hebbala
ವಿಶ್ವನಾಥ್ ಪಾಟೀಲ್ ಹೆಬ್ಬಾಳ

By

Published : Apr 19, 2023, 12:12 AM IST

ಕಲಬುರಗಿ : ಹೈವೋಲ್ಟೇಜ್ ಕ್ಷೇತ್ರವಾದ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ ಅವರನ್ನು ಸೋಲಿಸಲು ಟಾರ್ಗೆಟ್ ಹಾಕಿದ್ದ ಬಿಜೆಪಿಗೆ ಬಂಡಾಯದ ಶಾಕ್ ತಟ್ಟಿದೆ. ಮಣಿಕಂಠ ರಾಠೋಡ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದಕ್ಕೆ ಚಿತ್ತಾಪುರ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಪಕ್ಷದ ಮುಖಂಡರು ಹೈಕಮಾಂಡ್ ವಿರುದ್ದ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸುವಂತೆ ಕೇಸರಿ ನಾಯಕರಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ತೀವ್ರ ಒತ್ತಡ ಹಾಕುತ್ತಿದ್ದು, ಇದರ ನಡುವೆ ಚಿತ್ತಾಪುರ ಮಾಜಿ ಶಾಸಕ, ಬಿಜೆಪಿ ಮುಖಂಡ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಬಿಜೆಪಿಗೆ ರಾಜಿನಾಮೆ ನೀಡಿ ಗುಡ್ ಬೈ ಹೇಳಿದ್ಧಾರೆ. ಹೆಬ್ಬಾಳ ರಾಜಿನಾಮೆ ಬೆನ್ನಲ್ಲೆ ಟಿಕೆಟ್ ವಂಚಿತ ಅರವಿಂದ್​ ಚವ್ಹಾಣ್ ಕೂಡ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತ್ಯಂತ ನೋವು, ಭಾವುವಕರಾಗಿ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ರೌಡಿಸಂ, ಕಳ್ಳತನ, ಬೈಯೋರಿಗೆ ಗೂಂಡಾಗಿರಿ ಮಾಡೋರಿಗೆ ಬಿಜೆಪಿ ಟಿಕೆಟ್ ನೀಡಿದೆ. ನನ್ನಂಥ ನಿಷ್ಠಾವಂತ ಕಾರ್ಯಕರ್ತರಿಗೆ ಈಗಿನ ಬಿಜೆಪಿಯಲ್ಲಿ ಬೆಲೆ ಇಲ್ಲ. ಬಿಜೆಪಿ ನನಗೆ ದ್ರೋಹ ಮಾಡಿದೆ ಅಂತಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸಾಲು ಸಾಲು ಬಿಜೆಪಿ ಮುಖಂಡರ ರಾಜೀನಾಮೆಯಿಂದ ಚಿತ್ತಾಪುರ ಕ್ಷೇತ್ರದಲ್ಲಿ ಭಾರೀ ಪೆಟ್ಟು ಬಿಳುತ್ತಿದ್ದು, ಚಿತ್ತಾಪುರ ಬಿಜೆಪಿ ಬಂಡಾಯ ಅಭ್ಯರ್ಥಿ ಸೋಲಿನ ಮುನ್ಸೂಚನೆ ನೀಡುತ್ತಿದೆ. ಹೇಗಾದರೂ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರೀಯಾಂಕ್​ ಖರ್ಗೆ ಅವರನ್ನು ಸೋಲಿಸಲು ಸ್ಕೇಚ್ ಹಾಕಿದ್ದ ಕೇಸರಿ ನಾಯಕರಿಗೆ ಅವರದ್ದೆ ಮುಖಂಡರು ರಾಜೀನಾಮೆ ನೀಡುತ್ತ ಶಾಕ್ ಕೊಡುತ್ತಿದ್ದಾರೆ.

ಇದನ್ನೂ ಓದಿ :ಮೀಸಲಾತಿ ವಿಚಾರ ಬಿಜೆಪಿ ಷಡ್ಯಂತ್ರ ಸುಪ್ರೀಂ ಮೂಲಕ ಬಹಿರಂಗವಾಗಿದೆ: ಗೌರವ್ ವಲ್ಲಭ್

ABOUT THE AUTHOR

...view details