ಕಲಬುರಗಿ: ಜಿಲ್ಲೆಯಲ್ಲಿ ಜನರಿಗೆ ಮತ್ತೆ ಭೂಕಂಪನ ಹಾಗೂ ವಿಚಿತ್ರ ಸದ್ದು ಕೇಳಿಬಂದ ಅನುಭವವಾಗಿದೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಅನೇಕ ಗ್ರಾಮಗಳಲ್ಲಿ ಜನ ಮನೆಯಿಂದ ಹೊರಗೋಡಿ ಬಂದು ರಾತ್ರಿ ಜಾಗರಣೆಯನ್ನೇ ಮಾಡಿದ್ದಾರೆ.
ಚಿಂಚೋಳಿ ತಾಲೂಕಿನ ಸುಲೇಪೇಟ್, ಚಿಮ್ಮಾಇದ್ಲಾಯಿ, ದಸ್ತಾಪುರ, ನೀಮಾಹೊಸಹಳ್ಳಿ, ಗಡಿಕೇಶ್ವರ, ಅಣವಾರ, ಗೌಡನಹಳ್ಳಿ, ಇಂದ್ರಪಾಡ ಹೊಸಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಘಟನೆ ನಡೆದಿದೆ. ಬೆಚ್ಚಿಬಿದ್ದ ಗ್ರಾಮಸ್ಥರು ಮನೆಯಿಂದ ಹೊರಬಂದು ಕಟ್ಟೆಗಳ ಮೇಲೆ, ಬಯಲು ಪ್ರದೇಶದಲ್ಲಿ ಆಶ್ರಯ ಪಡೆದರು.