ಕರ್ನಾಟಕ

karnataka

By

Published : Jan 8, 2021, 10:52 PM IST

ETV Bharat / state

57 ವರ್ಷದ ಈ ವ್ಯಕ್ತಿಗೆ 8 ಮಕ್ಕಳು.. ಹೆತ್ತ ಮಕ್ಕಳ ಮದುವೆ ಮಾಡ್ಬೇಕಿದ್ದವ 2ನೇ ವಿವಾಹವಾದ..

ಒಂದೆಡೆ ಪತ್ನಿಯ ಆರೋಪ ಹೀಗಿದ್ರೆ ಇನ್ನೊಂದೆಡೆ ಪತಿಯ ಆರೋಪ ಬೇರೆನೇ ಇದೆ. ಇಬ್ರಾಹಿಂ ಪಟೇಲ್ ಈ ಹಿಂದೆ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಜಿಲ್ಲಾ ಪಂಚಾಯತ್ ಸದಸ್ಯೆಯನ್ನಾಗಿ ಮಾಡಿದ್ದರು. ಜೊತೆಗೆ ಮಕ್ಕಳಿಗೆ ಡಾಕ್ಟರ್, ಎಂಜಿಯರಿಂಗ್ ಓದಿಸಿದ್ದಾರೆ. ಆದ್ರೆ, ಕಳೆದ ಕೆಲ ತಿಂಗಳಿಂದ ಕುಟುಂಬದಲ್ಲಿ ವಿರಸ ಹೆಚ್ಚಾಗಿದೆ..

dsd
ಗಂಡನ ವಿರುದ್ಧ ಠಾಣೆ ಮೆಟ್ಟಿಲೇರಿದ ಜಿ.ಪಂ ಸದಸ್ಯೆ

ಕಲಬುರಗಿ: ಆಕೆ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ. ಬರೋಬ್ಬರಿ ಎಂಟು ಮಕ್ಕಳ ತಾಯಿ. ಆಕೆಯ ಪತಿಗೆ ಐವತ್ತೇಳು ವರ್ಷ. ಆದ್ರೆ, ಪತಿ ಐವತ್ತೇಳು ವರ್ಷದಲ್ಲಿ ಇದೀಗ ಬೇರೊಂದು ಮದುವೆಯಾಗಿದ್ದಾನೆ.

ಪತಿಯ ವಂಚನೆಯಿಂದ ಬೀದಿಗೆ ಬಿದ್ದಿರುವ ಮಹಿಳೆ ಹೆಸರು ಮಾಲೀಯಾ ಸುಲ್ತಾನ. ಇವರು ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ. ಎಂಟು ಮಕ್ಕಳ ತಾಯಿಯಾಗಿರುವ ಮಾಲೀಯ ಸುಲ್ತಾನ್​ಗೆ ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಜೀವನ ಹೇಗೆ ನಡೆಸೋದು ಎಂಬ ಚಿಂತೆ ಕಾಡುತ್ತಿದೆ. ಇದಕ್ಕೆ ಕಾರಣ ಅವರ ಪತಿಯಂತೆ.

ಮಾಲೀಯಾ ಸುಲ್ತಾನರ ವಿವಾಹ ಮೂವತ್ತು ವರ್ಷದ ಹಿಂದೆ ಚಿತ್ತಾಪುರ ತಾಲೂಕಿನ ಹಲಕರ್ಟಾ ಗ್ರಾಮದ ನಿವಾಸಿ ಇಬ್ರಾಹಿಂ ಪಟೇಲ್ ಜೊತೆಯಾಗಿತ್ತು. ಈ ದಂಪತಿಗೆ ಎಂಟು ಮಕ್ಕಳಿದ್ದಾರೆ. ಐವರು ಹೆಣ್ಣು ಮಕ್ಕಳು, ಮೂವರು ಪುತ್ರರು. ಹೆಣ್ಣು ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಮಕ್ಕಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ಇದೀಗ ಮಾಲೀಯಾ ಸುಲ್ತಾನ ಪತಿ ಇಬ್ರಾಹಿಂ ಪಟೇಲ್ ಮತ್ತೊಂದು ಮದುವೆಯಾಗಿದ್ದಾರೆ.

ಮದುವೆಯಾದ ನಂತರ ಮಾಲೀಯಾ ಸುಲ್ತಾನ ಕುಟುಂಬಕ್ಕೆ ಖರ್ಚು ವೆಚ್ಚಕ್ಕೆ ಸಹ ಹಣ ನೀಡುತ್ತಿಲ್ಲವಂತೆ. ಪ್ರತಿ ತಿಂಗಳು ಐವತ್ತು ಸಾವಿರ ರೂಪಾಯಿ ನೀಡುವುದಾಗಿ ಇಬ್ರಾಹಿಂ ಪಟೇಲ್ ಹೇಳಿದ್ದರಂತೆ. ಇರುವ ಬಾಡಿಗೆ ಮನೆಯನ್ನು ಸಹ ಖಾಲಿ ಮಾಡುವಂತೆ ಧಮಕಿ ಹಾಕುತ್ತಿದ್ದಾರೆ. ಮನೆ ಖರ್ಚು, ಮಕ್ಕಳ ಶಿಕ್ಷಣದ ಖರ್ಚು ತಾನು ಹೇಗೆ ನಿಭಾಯಿಸೋದು ಎಂದು ಮಾಲೀಯಾ ಸುಲ್ತಾನ್ ಚಿಂತಿಸುತ್ತಿದ್ದಾರೆ.

ಒಂದೆಡೆ ಪತ್ನಿಯ ಆರೋಪ ಹೀಗಿದ್ರೆ ಇನ್ನೊಂದೆಡೆ ಪತಿಯ ಆರೋಪ ಬೇರೆನೇ ಇದೆ. ಇಬ್ರಾಹಿಂ ಪಟೇಲ್ ಈ ಹಿಂದೆ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಜಿಲ್ಲಾ ಪಂಚಾಯತ್ ಸದಸ್ಯೆಯನ್ನಾಗಿ ಮಾಡಿದ್ದರು. ಜೊತೆಗೆ ಮಕ್ಕಳಿಗೆ ಡಾಕ್ಟರ್, ಎಂಜಿಯರಿಂಗ್ ಓದಿಸಿದ್ದಾರೆ. ಆದ್ರೆ, ಕಳೆದ ಕೆಲ ತಿಂಗಳಿಂದ ಕುಟುಂಬದಲ್ಲಿ ವಿರಸ ಹೆಚ್ಚಾಗಿದೆ.

ಇದಕ್ಕೆಲ್ಲಾ ಕಾರಣ ತನ್ನ ಪತ್ನಿ ಮಾಲೀಯ ಸುಲ್ತಾನ್ ಅನ್ನೋದು ಇಬ್ರಾಹಿಂ ಪಟೇಲ್ ಆರೋಪ. ಸದ್ಯ ನ್ಯಾಯಕ್ಕಾಗಿ ಮಾಲೀಯಾ ಸುಲ್ತಾನ್ ಪತಿ ವಿರುದ್ಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ABOUT THE AUTHOR

...view details