ಕರ್ನಾಟಕ

karnataka

ETV Bharat / state

2ನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ!

ಕೋವಿಡ್ ವ್ಯಾಕ್ಸಿನ್​ನಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಇಂದು ಸ್ವತಃ ನಾನೇ  ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಕೊರೊನಾ ವಾರಿಯರ್ಸ್ ಧೈರ್ಯದಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ ವೈದ್ಯಕೀಯ ಸಿಬ್ಬಂದಿಯಲ್ಲಿ ಮನವಿ ಮಾಡಿದರು.

District Collector V V Jyotsna Drive to Second stage covid vaccination
ಎರಡನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ

By

Published : Feb 8, 2021, 12:01 PM IST

ಕಲಬುರಗಿ: ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ ಸ್ವತಃ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಎರಡನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿದರು.

ಎರಡನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ಕಲಬುರಗಿಯ ಜಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಕ್ಸಿನ್ ಪಡೆದು ಬಳಿಕ ಮಾತನಾಡಿದ ಅವರು, ಕೋವಿಡ್ ವ್ಯಾಕ್ಸಿನ್​ನಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಇಂದು ಸ್ವತಃ ನಾನೇ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇನೆ. ಯಾವುದೇ ತೊಂದರೆಗಳಾಗಿಲ್ಲ, ಈ ಹಿಂದೆ ಕೆಲವೊಬ್ಬರಿಗೆ ಸಣ್ಣ-ಪುಟ್ಟ ತೊಂದರೆಗಳಾಗಿವೆ. ಆದರೆ, ಯಾರಿಗೂ ಅಂತಹ ದೊಡ್ಡ ಸಮಸ್ಯೆಯಾಗಿಲ್ಲ. ಕೊರೊನಾ ವಾರಿಯರ್ಸ್ ಧೈರ್ಯದಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿದರು.

ಓದಿ:ದೇಶದಲ್ಲಿ ಕೊರೊನಾ​ ಗುಣಮುಖರ ಪ್ರಮಾಣ ಶೇ. 97.19ಕ್ಕೆ ಏರಿಕೆ.. 58 ಲಕ್ಷ ಮಂದಿಗೆ ಲಸಿಕೆ

ಇಂದಿನಿಂದ 3 ದಿನಗಳ ಕಾಲ ನಡೆಯಲಿರುವ ವ್ಯಾಕ್ಸಿನೇಷನ್​‌ನಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರ ವ್ಯಾಕ್ಸಿನ್ ನೀಡಲಾಗುವುದು.

ABOUT THE AUTHOR

...view details