ಕಲಬುರಗಿ :ತಳವಾರ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಕೆಲ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ತಳವಾರ, ಟೋಕರೆ ಕೋಲಿ, ಅಂಬಿಗ, ಬೆಸ್ತ ಎಸ್ಟಿ. ಬುಡಕಟ್ಟು ಹೋರಾಟ ಸಂಘದ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಆರೋಪಿಸಿದ್ದಾರೆ.
ತಳವಾರ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಾರತಮ್ಯ.. ಬುಡಕಟ್ಟು ಹೋರಾಟ ಸಂಘದ ಆರೋಪ
ಈ ತಾರತಮ್ಯ ನೀತಿ ಕೈಬಿಡಬೇಕು. ಕೋಲಿ ಸಮುದಾಯದಲ್ಲಿರೋ ತಳವಾರರಿಗೂ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ..
ಬುಡಕಟ್ಟು ಹೋರಾಟ ಸಂಘದ ಆರೋಪ
ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪರಿವಾರ ಹಾಗೂ ತಳವಾರ ಸಿದ್ಧಿ ಜನಾಂಗವನ್ನು ಎಸ್ಟಿಗೆ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರವೂ ಗೆಜೆಡ್ ಹೊರಡಿಸಿ, ಪ್ರಮಾಣ ಪತ್ರ ನೀಡಲು ಆದೇಶಿಸಿದೆ. ಆದರೆ, ತಳವಾರ ಬೇಡ, ತಳವಾರ ಕಬ್ಬಲಿಗ ಎಂದು ಆದೇಶ ತಿರುಚೋ ಹುನ್ನಾರ ನಡೆದಿದೆ. ಕಬ್ಬಲಿಗ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೆ ವಂಚನೆ ಮಾಡಲಾಗುತ್ತಿದೆ.
ಈ ತಾರತಮ್ಯ ನೀತಿ ಕೈಬಿಡಬೇಕು. ಕೋಲಿ ಸಮುದಾಯದಲ್ಲಿರೋ ತಳವಾರರಿಗೂ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.