ನಿರುದ್ಯೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 71 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
ಹುದ್ದೆ ವಿವರ: ಕಲಬುರಗಿಯ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಖಾಲಿ ಇರುವ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
- ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು 3
- ಮಕ್ಕಳ ತಜ್ಞ ವೈದ್ಯರು 1
- ಅರವಳಿಕೆ ತಜ್ಞ ವೈದ್ಯರು 8
- ಲ್ಯಾಬ್ ಟೆಕ್ನಿಶಿಯನ್ 1
- ಮೆಡಿಕಲ್ ಆಫೀಸರ್ 14
- ಕೌನ್ಸೆಲರ್ 1
- ಮಕ್ಕಳ ಆರೋಗ್ಯ ಸಮಾಲೋಚಕರು 1
- ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು 5
- ಆಯುಷ್ ವೈದ್ಯರು 6
- ಆರ್ಬಿಎಸ್ಕೆ ಆಯುಷ್ ಮಹಿಳಾ ವೈದ್ಯರು 2
- ಸೀನಿಯರ್ ಮೆಡಿಕಲ್ ಆಫೀಸರ್ ಡಿಆರ್ಟಿಬಿ ಕೇಂದ್ರ 1
- ಮೆಡಿಕಲ್ ಆಫೀಸರ್ 1
- ಟಿಬಿಎಚ್ವಿ 1
- ಫಿಜಿಯೋಥೆರಪಿಸ್ಟ್ 1
- ತಜ್ಞ ವೈದ್ಯರು 1
- ವೈದ್ಯಾಧಿಕಾರಿ 15
- ಶುಶ್ರೂಷಕರು 4
- ಪ್ರಯೋಗಾಲಯ ತಂತ್ರಜ್ಞರು
- ಆಪ್ತ ಸಮಾಲೋಚಕರು 1
- ಮೊಬೈಲ್ ಐಸಿಟಿಸಿ ವೆಹಿಕಲ್ ಡ್ರೈವರ್ಸ್ 1
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವೈದ್ಯಕೀಯ ಮತ್ತು ಇತರೆ ಪದವಿಯನ್ನು ಹೊಂದಿರಬೇಕು.
ವೇತನ: ಅಭ್ಯರ್ಥಿಗಳು ಹುದ್ದೆಗೆ ಅನುಸಾರ 35 ವರ್ಷದಿಂದ 60 ವರ್ಷದ ವಯೋಮಿತಿ ಹೊಂದಿರಬೇಕು