ಕಲಬುರಗಿ: ಯುಗಾದಿ ಅಮವಾಸ್ಯೆ ಪ್ರಯುಕ್ತ ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರನ್ನು ಪೊಲೀಸರು ಚದುರಿಸಿ ಕಳಿಸಿರುವ ಘಟನೆ ನಡೆದಿದೆ.
ಶರಣಬಸವೇಶ್ವರ ದರ್ಶನಕ್ಕೆ ಬಂದ ಭಕ್ತ ಗಣವನ್ನು ಚದುರಿಸಿ ಮನೆಗೆ ಕಳುಹಿಸಿದ ಪೊಲೀಸರು - ಕೊರೊನಾ ಸುದ್ದಿ
ಕೊರೊನಾ ಭೀತಿ ನಡುವೆಯೂ ಯುಗಾದಿ ಅಮವಾಸ್ಯೆ ಪ್ರಯುಕ್ತ ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನಕ್ಕೆ ಸಾಲು ಸಾಲಾಗಿ ಬರುತ್ತಿರುವ ಜನರನ್ನು ಪೊಲೀಸರು ಚದುರಿಸಿ ಮನೆಗೆ ಕಳುಹಿಸುತ್ತಿದ್ದಾರೆ.
ಕಲಬುರಗಿ
ಕೊರೊನಾ ಭೀತಿ ಹಿನ್ನಲೆ ಜಿಲ್ಲೆಯ ಎಲ್ಲಾ ದೇವಸ್ಥಾನಗಳಿಗೆ ಬೀಗ ಹಾಕಲಾಗಿದೆ, ಜನ ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಕೆಯ ನಡುವೆಯೂ ಭಕ್ತರು ಶರಣನ ದರ್ಶನಕ್ಕೆ ಬರುತ್ತಿದ್ದಾರೆ.
ದೇವಸ್ಥಾನಕ್ಕೆ ಬೀಗ ಹಾಕಿದರಿಂದ ಮುಖ್ಯದ್ವಾರದ ಬಳಿಯೇ ಪೂಜೆ ಸಲ್ಲಿಸಿ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವದರಿಂದ ಪೊಲೀಸರು ಭಕ್ತರನ್ನು ಚದುರಿಸಿ ಕಳಿಸಿದ್ದಾರೆ.