ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಸಂಬಂಧಿಕರಿಂದಲೇ ಮಹಿಳೆ ಬರ್ಬರ ಹತ್ಯೆ: ರಕ್ಷಣೆಗೆ ಧಾವಿಸಿದ ನಾಲ್ವರು ಮಕ್ಕಳಿಗೆ ಗಂಭೀರ ಗಾಯ - ಕಲಬುರಗಿ ಮಹಿಳೆ ಬರ್ಬರ ಹತ್ಯೆ

ಕಲಬುರಗಿ ನಗರದ ರೇವಣಸಿದ್ದೇಶ್ವರ್ ಕಾಲೋನಿಯ ಕೆ.ಕೆ. ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮಹಿಳೆಗೆ ಹರಿತ ಆಯುಧಗಳಿಂದ ಇರಿದು ಹತ್ಯೆ ಮಾಡಿದ್ದಾರೆ.

Woman brutal Murder
ಆಸ್ತಿ ವಿವಾದ

By

Published : Jul 12, 2023, 6:57 AM IST

ಕಲಬುರಗಿ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮನೆಗೆ ನುಗ್ಗಿದ ಸಂಬಂಧಿಕರು ಹರಿತವಾದ ಆಯುಧದಿಂದ ಮಹಿಳೆಯೊಬ್ಬರಿಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಜೊತೆಗಿದ್ದ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಈ ಘಟನೆ ನಗರದ ರೇವಣಸಿದ್ದೇಶ್ವರ್ ಕಾಲೋನಿಯ ಕೆ.ಕೆ. ನಗರದಲ್ಲಿ ಮಂಗಳವಾರ ನಡೆದಿದೆ.

ವಿಜಯಲಕ್ಷ್ಮೀ ಮಠ ಮೃತರು. ಈಕೆಯನ್ನು ರಕ್ಷಿಸಲು ಹೋದ ನಾಲ್ವರು ಮಕ್ಕಳ ಮೇಲೂ ಹಂತಕರು ಹಲ್ಲೆ ಮಾಡಿದ್ದಾರೆ. ಮಹಾದೇವ, ರೇಣುಕಾ, ಪಲ್ಲವಿ, ನಾಗರಾಜ ಗಾಯಗೊಂಡಿದ್ದಾರೆ. ಘಟನೆಗೆ ಆಸ್ತಿ ವಿವಾದವೇ ಕಾರಣ ಎಂದು ಹೇಳಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರ: ವಿಜಯಲಕ್ಷ್ಮೀ ಅವರ ಪತಿ ಮಲ್ಕಯ್ಯ ಮಠ ಅವರು ಕೆಲಸಕ್ಕೆ ಹೋಗಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಅವರ ಸಂಬಂಧಿಕರಾದ ರೇವಣಸಿದ್ದಯ್ಯ ಮಠ, ಸಿದ್ರಾಮಯ್ಯ ಮಠ ಮತ್ತು ಮಡೆಪ್ಪ ಸ್ವಾಮಿ ಮಾರಕಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿ, ಆಸ್ತಿ ಬೇಡುತ್ತೀರಾ ಎಂದೆಲ್ಲ ಹೆದರಿಸಿದ್ದಾರೆ. ಮಾತಿಗೆ ಮಾತು ಬೆಳೆದು ರೇವಣಸಿದ್ದಯ್ಯ ಸ್ವಾಮಿ ಚಾಕು ತೆಗೆದು ವಿಜಯಲಕ್ಷ್ಮೀ ಅವರ ಹೊಟ್ಟೆ, ತಲೆ ಮತ್ತು ಬಲರಟ್ಟೆಗೆ ಇರಿದಿದ್ದಾನೆ. ತಾಯಿಯನ್ನು ಬಿಡಿಸಲು ಹೋದ ರೇಣುಕಾ, ಗಂಗಾಧರಸ್ವಾಮಿ, ಪಲ್ಲವಿ, ನಾಗರಾಜ್ ಮೇಲೂ ಹಲ್ಲೆ ಮಾಡಿ ಗಾಯಗೊಳಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಿರಿಯ ಪುತ್ರ ಮಹಾದೇವ ಪೊಲೀಸರಿಗೆ ದೂರು ನೀಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಪತ್ನಿಯ ಮೇಲೆ ಸಂಶಯ : ಬ್ಲೇಡ್‌ನಿಂದ 26 ದಿನಗಳ ಮಗುವಿನ ಕುತ್ತಿಗೆ ಕೊಯ್ದ ಪಾಪಿ ಅಪ್ಪ!

ಘಟನೆಯ ಹಿನ್ನೆಲೆ :ಹತ್ಯೆಗೊಳಗಾದ ವಿಜಯಲಕ್ಷ್ಮೀ ಅವರ ಪತಿ ಮಲ್ಕಯ್ಯ ಮಠ ಅವರ ತಂದೆಗೆ ಮೂವರು ಮಕ್ಕಳು. ಕುಪಯ್ಯ ಸ್ವಾಮಿ, ಸಿದ್ರಾಮಯ್ಯ ಸ್ವಾಮಿ ಹಾಗೂ ಮೃತಳ ಪತಿ ಮಲ್ಕಯ್ಯ ಸ್ವಾಮಿ. ಇದರಲ್ಲಿ ಕುಪಯ್ಯ ಸ್ವಾಮಿ ಹಾಗೂ ಸಿದ್ರಾಮಯ್ಯ ಸ್ವಾಮಿ‌ ಮೃತಪಟ್ಟಿದ್ದಾರೆ. ಮಲ್ಕಯ್ಯ ಮಠ ಅವರ ಹೆಸರಿನಲ್ಲಿ ಸಿಂದಗಿ (ಬಿ) ಸೀಮಾಂತರದಲ್ಲಿ ಸರ್ವೆ ನಂಬರ್ 58/2ರಲ್ಲಿ 5.23 ಗುಂಟೆ ಹಾಗೂ ಸರ್ವೆ ನಂಬರ್ 98/1ರಲ್ಲಿ 3.12 ಗುಂಟೆ ಜಮೀನು ಇದೆ. ಆದ್ರೆ, ಈ ಜಮೀನು ಕುಪ್ಪಯ್ಯ ಅವರ ಮಡದಿ ಹಾಗೂ ಮಕ್ಕಳು ಕಬ್ಜಾ ಮಾಡಿಕೊಂಡಿದ್ದಾರೆ. ಆಸ್ತಿ ಬಿಟ್ಟುಕೊಡುವಂತೆ ಮಲ್ಕಯ್ಯ ಮಠ ಕುಟುಂಬಸ್ಥರು ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಕೂಡ ವಿಚಾರಣೆ ನಡೆದು ಹೊಲ‌ ಬಿಟ್ಟು ಕೊಡುವಂತೆ ಕೋರ್ಟ್​ ತೀರ್ಪು ನೀಡಿತ್ತು. ಇದರಿಂದ ರೊಚ್ಚಿಗೆದ್ದ ಕುಪಯ್ಯ ಸ್ವಾಮಿ ಕುಟುಂಬಸ್ಥರೇ ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ.

ಇದನ್ನೂ ಓದಿ :ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯ ಇಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details