ಕಲಬುರಗಿ:ತನ್ನ ಸಹೋದರನ ಜೊತೆ ತನ್ನ ಪತ್ನಿ ಓಡಿ ಹೋಗಲು ತಂದೆ-ತಾಯಿ ಕಾರಣ ಎಂದು ಆರೋಪಿಸಿ ತಾಯಿಯನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಪಾಪಿ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಹೆತ್ತವ್ವನನ್ನು ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ರಾಮುವಿನ ಪತ್ನಿ ಆತನ ಸಹೋದರನ ಜೊತೆ ಓಡಿ ಹೋಗಿದ್ದು, ಇದಕ್ಕೆ ತನ್ನ ತಂದೆ ತಾಯಿಯೇ ಕಾರಣ ಎಂದು ಇಬ್ಬರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಬಳಲಿದ ತಾಯಿ ಕೆಂಚಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಳು.
ಅಫಜಲಪೂರ ತಾಲೂಕು ಬಂದರವಾಡ ಗ್ರಾಮದ ರಾಮು ನೂಲಾ ಶಿಕ್ಷೆಗೆ ಗುರಿಯಾದ ಆಪಾಧಿತನಾಗಿದ್ದಾನೆ. ರಾಮುವಿನ ಪತ್ನಿ ಆತನ ಸಹೋದರನ ಜೊತೆ ಓಡಿ ಹೋಗಿದ್ದು, ಇದಕ್ಕೆ ತನ್ನ ತಂದೆ ತಾಯಿಯೇ ಕಾರಣ ಎಂದು ಇಬ್ಬರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಬಳಲಿದ ತಾಯಿ ಕೆಂಚಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಳು.
ಈ ಘಟನೆ 2009 ಡಿ. 01 ರಂದು ಬಂದರವಾಡ ಗ್ರಾಮದಲ್ಲಿ ನಡೆದಿತ್ತು. ಘಟನೆ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದೇವಲ ಗಾಣಗಾಪುರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣವನ್ನು ಸಲ್ಲಿಸಿದ್ದರು. ಸುದೀರ್ಘ ಕಾಲ ವಿಚಾರಣೆ ನಡೆಸಿದ ಕಲಬುರಗಿ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ವಾದ ಪ್ರತಿವಾದ ಆಲಿಸಿ ಆರೋಪಿ ರಾಮು ಕೊಲೆಗೈದಿದ್ದು ಸಾಭಿತಾದ ಹಿನ್ನೆಲೆ 30 ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.