ಕರ್ನಾಟಕ

karnataka

ETV Bharat / state

ಆಳಂದ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು: ಗ್ರಾಮಸ್ಥರಿಗೆ ಶುರುವಾಯ್ತು ನಡುಕ - ಕಲಬುರಗಿ ಲೆಟೆಸ್ಟ್​ ನ್ಯೂಸ್​

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Corona positive for Asha activist
ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು

By

Published : Jun 28, 2020, 1:38 PM IST

ಕಲಬುರಗಿ:ಕೊರೊನಾ ವಾರಿಯರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲೆಯ ಆಳಂದ ತಾಲೂಕಿನ 40 ವರ್ಷದ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದಾಗ ಆಶಾ ಕಾರ್ಯಕರ್ತೆಗೆ ಸೋಂಕು ಇರುವುದು ಸಾಬೀತಾಗಿದೆ. ಇವರಿಗೆ ಸೋಂಕು ತಗುಲಿದ್ದು, ಹೇಗೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆಶಾ ಕಾರ್ಯಕರ್ತೆ ಕಳೆದ ಅನೇಕ ದಿನಗಳಿಂದ ಕೊರೊನಾ ಕರ್ತವ್ಯದ ಹಿನ್ನೆಲೆ ಮಾಹಿತಿ ಸಂಗ್ರಹಿಸಲು ಗ್ರಾಮದಲ್ಲಿ ಸುತ್ತಾಡಿದ್ದರು ಎಂದು ತಿಳಿದುಬಂದಿದೆ.

ಗ್ರಾಮದ ಬಹುತೇಕ ಜನರ ಸಂಪರ್ಕಕ್ಕೆ ಬಂದಿರೋ ಆಶಾ ಕಾರ್ಯಕರ್ತೆಗೆ ಸೋಂಕು ತಗುಲಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ABOUT THE AUTHOR

...view details