ಕರ್ನಾಟಕ

karnataka

ETV Bharat / state

ಕಲಬುರಗಿ: ಬೆಡ್-ವೆಂಟಿಲೇಟರ್ ಸಿಗದೆ ಕೊರೊನಾ ಸೋಂಕಿತ ಸಾವು - ಕೊರೊನಾ ಸೋಂಕಿತ

ಕಲಬುರಗಿಯಲ್ಲಿ ಆಕ್ಸಿಜನ್, ಬೆಡ್​​​ಗಾಗಿ ರೋಗಿಗಳ ಪರದಾಟ ಮುಂದುವರೆದಿದ್ದು, ವೆಂಟಿಲೇಟರ್ ಮತ್ತು ಬೆಡ್ ಸಿಗದೆ ಕೊರೊನಾ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ಶಂಕರ (50) ಮೃತ ರೋಗಿ.

corona-infected-death-without-bed-ventilator-in-kalaburagi
ಕೊರೊನಾ ಸೋಂಕಿತ ಸಾವು

By

Published : Apr 21, 2021, 3:54 PM IST

ಕಲಬುರಗಿ: ನಾಲ್ಕು ಗಂಟೆಯಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಸಹ ಸರಿಯಾದ ಸಮಯಕ್ಕೆ ಬೆಡ್ ಹಾಗೂ ವೆಂಟಿಲೇಟರ್ ಸಿಗದೆ ಕೊರೊನಾ ಸೋಂಕಿತನೋರ್ವ ಕಾರಿನಲ್ಲೇ ಪ್ರಾಣ ಬಿಟ್ಟ ದಾರುಣ ಘಟನೆ ನಗರದ ಸತ್ಯ ಆಸ್ಪತ್ರೆ ಎದುರಿಗೆ ನಡೆದಿದೆ.

ಕೊರೊನಾ ಸೋಂಕಿತ ಸಾವು

ಓದಿ: 'ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ' - ನಿನ್ನೆಯ ಸಭೆ ಸಮರ್ಥಿಸಿಕೊಂಡ ಡಿಸಿಎಂ ಸವದಿ

ಕಲಬುರಗಿಯಲ್ಲಿ ಆಕ್ಸಿಜನ್, ಬೆಡ್​​ಗಾಗಿ ರೋಗಿಗಳ ಪರದಾಟ ಮುಂದುವರೆದಿದ್ದು, ವೆಂಟಿಲೇಟರ್ ಮತ್ತು ಬೆಡ್ ಸಿಗದೆ ಕೊರೊನಾ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದ ಶಂಕರ (50) ಮೃತ ರೋಗಿ.

ಕಳೆದ ನಾಲ್ಕು ಗಂಟೆಯಿಂದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಬೆಡ್ ಹಾಗೂ ವೆಂಟಿಲೇಟರ್ ಸಿಗದ ಕಾರಣ ಕಾರಿನಲ್ಲಿಯೇ ಮೃತ್ತಪಟ್ಟಿದ್ದಾರೆ. ಶಂಕರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಚಿಕಿತ್ಸೆ ಸಿಗದೆ ಕಲಬುರಗಿಯಲ್ಲಿ ಇದು ಎರಡನೇ ಸಾವಾಗಿದ್ದು, ಅವ್ಯವಸ್ಥೆಯ ವಿರುದ್ಧ ಮೃತ ಶಂಕರ್ ಕುಂಟುಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details