ಕಲಬುರಗಿ:ಕಾಂಗ್ರೆಸ್ ಬೇವಕೂಫ್ ಪಕ್ಷ. ವಿನಾಕಾರಣ ನಮ್ಮ ಪಕ್ಷದ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಾ ಬಂದಿದೆ ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಕಲಬುರ್ಗಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಎಐಎಂಐಎಂ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಓವೈಸಿ, ಖೂಬ್ ಬಚ್ಚಾ ಫೈದಾ ಕರೋ ಎಂದು ಕರೆ ನೀಡಿದ್ರು. ಖೂಬ್ ಅಂದ್ರೆ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿರಿ ಎಂದರ್ಥವಲ್ಲ. ಖೂಬುಸೂರತ್ ಮಕ್ಕಳನ್ನು ಹುಟ್ಟಿಸಿರಿ ಎಂದರ್ಥ. ಮಾತೆತ್ತಿದ್ರೆ ಖಬರಸ್ತಾನ್ ಇಲ್ಲವೇ, ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ನಾವೇಕೆ ಪಾಕಿಸ್ತಾನಕ್ಕೆ ಹೋಗಬೇಕು. ನಾವು ಇಲ್ಲಿಯೇ ಹುಟ್ಟಿದ್ದೇವೆ,ಇಲ್ಲಿಯೇ ಜೀವಿಸುತ್ತೇವೆ,ಇಲ್ಲಿಯೇ ಸಾಯ್ತೇವೆ. ನಮ್ಮನ್ನು ಇಲ್ಲಿಂದ ಹೋಗು ಎನ್ನಲು ಇವರ್ಯಾರು ಎಂದು ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.