ಕರ್ನಾಟಕ

karnataka

ETV Bharat / state

'ನೂತನ ರಾಷ್ಟ್ರೀಯ ಶಿಕ್ಷಣ ನೀತಿ - 2020ರ ಅನುಷ್ಠಾನದಿಂದ ನವಭಾರತ ನಿರ್ಮಾಣ ಸಾಧ್ಯ' - ನೂತನ ಶಿಕ್ಷಣ ನೀತಿ

ನೂತನ ಶಿಕ್ಷಣ ನೀತಿಯು ಕಳೆದ ಐದೂವರೆ ವರ್ಷಗಳಿಂದ ನುರಿತ ಶಿಕ್ಷಣ ತಜ್ಞರ ಸತತ ಅಧ್ಯಯನದ ಶ್ರಮದ ಪ್ರತಿಫಲವಾಗಿ ಜಾರಿಗೊಳ್ಳುತ್ತಿದೆ. ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇಟ್ಟಿದೆ..

National Education Policy - 20  One Day Seminar
ರಾಷ್ಟ್ರೀಯ ಶಿಕ್ಷಣ ನೀತಿ-2020 ಒಂದು ದಿನದ ವಿಚಾರ ಸಂಕಿರಣ

By

Published : Aug 24, 2021, 10:44 PM IST

ಕಲಬುರಗಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದಿಂದ ನವಭಾರತ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಸಮಕುಲಪತಿಗಳಾದ ಡಾ. ಸಿ. ಎನ್ ಅಶ್ವತ್ಥ್​​ ನಾರಾಯಣ ಹೇಳಿದ್ದಾರೆ.

ಡಾ. ಸಿ. ಎನ್ ಅಶ್ವತ್ಥ​​ ನಾರಾಯಣ

ನಗರದ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಿಜಿಟಲ್ ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಮುಂದಿನ ದಿನಗಳಲ್ಲಿ ಈ ಭಾಗದ ಗುಲ್ಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಇನ್ನಿತರ ವಿವಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನೂತನ ಶಿಕ್ಷಣ ನೀತಿ-2020 ಅನುಷ್ಠಾನಗೊಳಿಸಿ ನಿಜವಾದ ಕಲ್ಯಾಣ ಮಾಡುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು ಹೇಳಿದರು.

ಶಿಕ್ಷಣ ಪದ್ಧತಿಯಲ್ಲಿನ ನ್ಯೂನತೆಗಳನ್ನು ತೆಗೆದು ಹಾಕಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ಒದಗಿಸುವುದೇ ನೂತನ ಶಿಕ್ಷಣ ನೀತಿಯ ಗುರಿಯಾಗಿದೆ. ಮಕ್ಕಳ ಕಲಿಕೆಯು 6 ವರ್ಷದಿಂದ ಪ್ರಾರಂಭವಾಗುವುದನ್ನು ಮುಂದೆ 3 ವರ್ಷದಿಂದ ಆರಂಭಿಸಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ತಿಳಿಸಿದರು.

ನೂತನ ಶಿಕ್ಷಣ ನೀತಿಯು ಕಳೆದ ಐದೂವರೆ ವರ್ಷಗಳಿಂದ ನುರಿತ ಶಿಕ್ಷಣ ತಜ್ಞರ ಸತತ ಅಧ್ಯಯನ ಶ್ರಮದ ಪ್ರತಿಫಲವಾಗಿ ಜಾರಿಗೊಳ್ಳುತ್ತಿದೆ. ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇಟ್ಟಿದೆ. ಇದರಿಂದಾಗಿ ನವ ಭಾರತದಲ್ಲಿ ನವ ಕರ್ನಾಟಕ ನಿರ್ಮಾಣವಾಗುತ್ತದೆ. ಹಳೆಯ ವ್ಯವಸ್ಥೆಗಳನ್ನು ತೆಗೆದು ಹಾಕುವ ಮೂಲಕ ಶಿಕ್ಷಣ ಪದ್ದತಿಯಲ್ಲಿ ವೈಜ್ಞಾನಿಕ ಹಾಗೂ ಡಿಜಿಟಲೀಕರಣ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಡಿಜಿಟಲ್ ಗ್ರಂಥಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವರು..

ಇದೇ ವೇಳೆ, ವಿವಿ ಆವರಣದಲ್ಲಿ ಗಣಕ ಆಧಾರಿತ ಶಿಕ್ಷಣ ಸಂಪನ್ಮೂಲ ಕೇಂದ್ರ ಡಿಜಿಟಲ್ ಗ್ರಂಥಾಲಯದ ನವೀಕರಣ ಹಾಗೂ ರೂಸಾ ಅನುದಾನದಡಿ ನಿರ್ಮಿತವಾಗಿರುವ ಪರಿಸರ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನ ವಿಭಾಗದ ಲ್ಯಾಬೊರೇಟರಿ ಕಟ್ಟಡ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳ ಕಟ್ಟಡಗಳನ್ನು ಸಚಿವ ಅಶ್ವತ್ಥ​ ನಾರಾಯಣ್ ಅವರು ಉದ್ಘಾಟಿಸಿದರು. ಇದಲ್ಲದೇ ರೂಸಾ ಅನುದಾನದಡಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು.

ಓದಿ:ಖ್ಯಾತಿಯ ಉತ್ತುಂಗಕ್ಕೇರಿದರೂ ಕನ್ನಡಿಗ ದ್ರೋಣಾಚಾರ್ಯನ ಮರೆಯದ ಬಂಗಾರದ 'ಬಾಹು' ನೀರಜ್..

ABOUT THE AUTHOR

...view details