ಕರ್ನಾಟಕ

karnataka

ETV Bharat / state

ವಿಶೇಷಚೇತನ ಎಂದು ಯಾಮಾರಿಸ್ತಿದ್ದ ಚಾಲಾಕಿ ನಿಜ ಬಣ್ಣ ಬಯಲು - ಕಲಬುರಗಿ

ವಿಶೇಷಚೇತನ ಎಂದು ಕಳ್ಳಾಟವಾಡಿ ಭಿಕ್ಷೆ ಬೇಡುತ್ತಿದ್ದ ಖದೀಮನ ಬಂಡವಾಳವನ್ನು ಕಲಬುರಗಿಯ ಜನತೆ ಬಯಲಿಗೆಳೆದಿದ್ದಾರೆ.

ಚಾಲಾಕಿ ಭಿಕ್ಷುಕನ ನಿಜ ಬಣ್ಣದ ವಿಡಿಯೋ
ಚಾಲಾಕಿ ಭಿಕ್ಷುಕನ ನಿಜ ಬಣ್ಣದ ವಿಡಿಯೋ

By

Published : Jul 20, 2020, 7:58 AM IST

ಕಲಬುರಗಿ: ನಗರದಲ್ಲಿ ತಾನು ವಿಶೇಷ ಚೇತನ ಎಂದು ಕಳ್ಳಾಟವಾಡಿ ಭಿಕ್ಷೆ ಬೇಡುತ್ತಿದ್ದ ಖದೀಮನ ಬಂಡವಾಳ ಇದೀಗ ಬಯಲಾಗಿದೆ.

ಇರ್ಫಾನ್ ಭಿಕ್ಷಾಟನೆಯಲ್ಲಿ ತೊಡಗಿದ್ದ ಖದೀಮ. ಈತನಿಗೆ ಯಾವುದೇ ನ್ಯೂನತೆ ಇಲ್ಲದ್ದಿದ್ದರೂ, ಕಾಲಿಗೆ ಬಟ್ಟೆ ಕಟ್ಟಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ. ಅಷ್ಟೇ ಅಲ್ಲದೆ, ದಿನಕ್ಕೆ ಸಾವಿರಾರು ರೂಪಾಯಿ ಕಲೆಕ್ಷನ್​ ಮಾಡಿ, ಸಂಜೆ ವೇಳೆ ಕುಡಿದು ಮೋಜು ಮಾಡುತ್ತಿದ್ದನಂತೆ. ಈತನ ಖತರ್ನಾಕ್​ ಕೆಲಸವನ್ನು ಸಾರ್ವಜನಿಕರು ಪತ್ತೆಹಚ್ಚಿದ್ದಾರೆ.

ಚಾಲಾಕಿ ಭಿಕ್ಷುಕನ ನಿಜ ಬಣ್ಣದ ವಿಡಿಯೋ

ಇನ್ನು ಈತ ದಿವ್ಯಾಂಗ ಎಂದು ಕನಿಕರ ತೋರಿ ಪ್ರೊ. ವಿಜಯಕುಮಾರ್ ಎಂಬುವವರು ನಿತ್ಯ ಆಹಾರ ನೀಡುತ್ತಿದ್ದರಂತೆ. ಆದರೆ ಈತ ಸುಳ್ಳು ಹೇಳಿ ಭಿಕ್ಷೆ ಬೇಡಿ ಬಳಿಕ ಬಟ್ಟೆ ಬದಲಾಯಿಸಿ ನಡೆದುಕೊಂಡು ಹೋಗುತ್ತಿರುವುದನ್ನು ಕಣ್ಣಾರೆ ಕಂಡಿರುವ ವಿಜಯಕುಮಾರ್​ ಈತನನ್ನು ತಡೆದು ಪ್ರಶ್ನಿಸಿದಾರೆ. ತಮ್ಮ ಮೊಬೈಲಿನಲ್ಲಿ ದೃಶ್ಯ ಕೂಡಾ ಸೆರೆ ಹಿಡಿಯುವ ಮೂಲಕ ಖತರ್ನಾಕ್ ಭಿಕ್ಷುಕನ ಕಳ್ಳಾಟ್ಟವನ್ನು ಬಯಲಿಗೆಳಿದ್ದಿದ್ದಾರೆ.

ABOUT THE AUTHOR

...view details