ಕರ್ನಾಟಕ

karnataka

ETV Bharat / state

ಆಟೋ ಚಾಲಕನ ಬರ್ಬರ ಕೊಲೆ.. ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು - ಕಲಬುರಗಿ ಕೊಲೆ

ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದೆ. ನಗರದ ಜಾಫರಬಾದ್ ಬಡಾವಣೆಯಲ್ಲಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Auto Driver Killed in Kalburgi
ಬರ್ಬರವಾಗಿ ಹತ್ಯೆಯಾದ ಆಟೋ ಚಾಲಕ ಸಂತೋಷ್ ಗುತ್ತೆದಾರ್

By

Published : Jun 23, 2021, 11:36 AM IST

Updated : Jun 23, 2021, 11:41 AM IST

ಕಲಬುರಗಿ:ಇತ್ತೀಚೆಗಷ್ಟೇ ವಿದ್ಯಾರ್ಥಿಯ ಬರ್ಬರ ಕೊಲೆಯಿಂದ ಬೆಚ್ಚಿಬಿದ್ದಿದ್ದ ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ಜಾಫರಬಾದ್ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಸಂತೋಷ್ ಗುತ್ತೇದಾರ್ (35) ಕೊಲೆಗೀಡಾಗಿರುವ ಆಟೋ ಚಾಲಕ. ದುಷ್ಕರ್ಮಿಗಳು ಸಂತೋಷ್​ನನ್ನು ಕೊಲೆ ಮಾಡಿ ನಸುಕಿನ ಜಾವ ಮನೆ ಬಳಿ ಶವ ತಂದು ಬಿಸಾಡಿ ಪರಾರಿಯಾಗಿದ್ದಾರೆ.

ಬರ್ಬರವಾಗಿ ಹತ್ಯೆಯಾದ ಆಟೋ ಚಾಲಕ ಸಂತೋಷ್ ಗುತ್ತೇದಾರ್

ಓದಿ : ಹೆಂಡತಿಗೆ ಚುಡಾಯಿಸುತ್ತಿದ್ದ ಯುವಕನಿಗೆ ಪೆಟ್ರೋಲ್​ ಸುರಿದು ಸುಟ್ಟ ಪ್ರಕರಣ: ಮೂವರ ಬಂಧನ

ನಿನ್ನೆ ತಡರಾತ್ರಿ ನಾಲ್ವರು ಸ್ನೇಹಿತರ ಜೊತೆ ಆಟೋದಲ್ಲಿ ಸಂತೋಷ್ ಹೊರ ಹೋಗಿದ್ದ. ಈ ವೇಳೆ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿದ ಹಂತಕರು ಬಳಿಕ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Last Updated : Jun 23, 2021, 11:41 AM IST

ABOUT THE AUTHOR

...view details