ಕರ್ನಾಟಕ

karnataka

ETV Bharat / state

ಕಲಬುರಗಿಯ ಆಶಾ ಹೆಗಡೆಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಭಾಗ್ಯ

ಸುಮಾರು12 ವರ್ಷಗಳಿಂದ ಕಲಬುರಗಿ ತಾಲೂಕಿನ ಶರಣಸಿರಸಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಆಶಾ ಹೆಗಡೆಯವರಿಗೆ ರಾಜ್ಯ ಸರ್ಕಾರದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಗೆ ಹೆಮ್ಮೆಯ ಕಿರೀಟ ಧರಿಸಿದಂತಾಗಿದೆ.

ಶಿಕ್ಷಕಿ ಆಶಾ ಹೆಗಡೆ

By

Published : Sep 5, 2019, 7:10 PM IST

ಕಲಬುರಗಿ : ಜಿಲ್ಲೆಯ ಶಿಕ್ಷಕಿ ಆಶಾ ಹೆಗಡೆಗೆ ರಾಜ್ಯ ಸರ್ಕಾರದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಗೆ ಹೆಮ್ಮೆಯ ಕಿರೀಟ ಧರಿಸಿದಂತಾಗಿದೆ.

ಕಲಬುರಗಿಯ ಆಶಾ ಹೆಗಡೆಯವರಿಗೆ ಸಂದಿತು ಉತ್ತಮ ಶಿಕ್ಷಕಿ ಪ್ರಶಸ್ತಿ

ಉತ್ತಮ ಶಿಕ್ಷಕಿ ಪುರಸ್ಕೃತರಾದ ಆಶಾ ಹೆಗಡೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರಾಗಿದ್ದು, ಕಳೆದ ಸುಮಾರು12 ವರ್ಷಗಳಿಂದ ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂಬ ಹಣೆಬರಹ ನಡುವೆಯೂ ಆಶಾ ಅವರು ಸತತ ಪರಿಶ್ರಮದ ಮೂಲಕ ಇಲ್ಲಿನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇವರು ಮುಖ್ಯ ಶಿಕ್ಷಕಿಯಾಗಿ ಹೊಣೆಹೊತ್ತ ಮೇಲೆ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಯಿತು. ಶಾಲೆ ಅಂದರೆ ಹೀಗಿರಬೇಕೆಂದು ಕನಸು ಕಂಡು ನಿರಂತರ ಶ್ರಮದ ಮೂಲಕ ಶಾಲೆಯ ಮತ್ತು ಮಕ್ಕಳ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿರುವುದನ್ನು ಗುರುತಿಸಿದ ರಾಜ್ಯ ಸರ್ಕಾರ ಇವರಿಗಿಂದು ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.

ABOUT THE AUTHOR

...view details