ಕಲಬುರಗಿ :ಸಚಿವ ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಕೇಳಿ ಬರುತ್ತಿದೆ. ಈ ನಡುವೆ ನಾನೂ ಕೂಡ ಸಚಿವಾಕಾಂಕ್ಷಿ ಇದ್ದೇನೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಸಿಗಬಹುದು ಅನ್ನೋ ವಿಶ್ವಾಸ ಇದೆ. ನನಗೂ ರಾಜಭವನದಿಂದ ಕರೆ ಬರಬಹುದು ಎಂದು ಕಾಯ್ದು ಕುಳಿತಿದ್ದೇನೆ ಎಂದು ತೆಲ್ಕೂರ್ ಹೇಳಿದ್ದಾರೆ.