ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸಿಕೊಡಿ: ಕಾರ್ಮಿಕ ಸಂಘಟನೆ ಒತ್ತಾಯ

ಕಲಬುರಗಿಯ ವಾಡಿ ಪಟ್ಟಣದಲ್ಲಿ ಗುತ್ತಿಗೆ ಕೆಲಸಕ್ಕೆಂದು ಕುಟುಂಬ ಸಮೇತ ಬಂದು ಲಾಕ್​ಡೌನಲ್ಲಿ ಸಿಕ್ಕಿಕೊಂಡು ನರಳಾಡುತ್ತಿರುವ ಅವರನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಒತ್ತಾಯಿಸಿದೆ.

AIUTUC labor union
ಎಐಯುಟಿಯುಸಿ ಕಾರ್ಮಿಕ ಸಂಘಟನೆ

By

Published : May 13, 2020, 10:57 PM IST

ಕಲಬುರಗಿ:ಲಾಕ್​ಡೌನ್​ನಲ್ಲಿ ಸಿಲುಕಿರುವಮಧ್ಯಪ್ರದೇಶ ‌ಮೂಲದ ರೈಲ್ವೆ ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ತಮ್ಮ ಊರಿಗೆ ಕಳುಹಿಸಿಕೊಡಿ ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಒತ್ತಾಯಿಸಿದೆ.

ಚಿತ್ತಾಪುರ ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರನ್ನು ಭೇಟಿಯಾದ ಸಂಘಟನೆಯ ಮುಖಂಡರು, ಜಿಲ್ಲೆಯ ವಾಡಿ ಪಟ್ಟಣದಲ್ಲಿ ಗುತ್ತಿಗೆ ಕೆಲಸಕ್ಕೆಂದು ಕುಟುಂಬ ಸಮೇತ ಬಂದು ಲಾಕ್​ಡೌನಲ್ಲಿ ಸಿಕ್ಕಿಕೊಂಡಿರುವ ಸುಮಾರು 25ಕ್ಕೂ ಅಧಿಕ ಜನ ತಮ್ಮ ಊರು ಸೇರುವ ತವಕದಲ್ಲಿದ್ದಾರೆ. ಆದ್ರೆ ಸರ್ಕಾರ ಈ ಬಡ ಕಾರ್ಮಿಕರನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.‌

ಕೊಡಲೇ ಸರ್ಕಾರ ಈ ಕಾರ್ಮಿಕರನ್ನು ಮಧ್ಯಪ್ರದೇಶಕ್ಕೆ ತಲುಪಿಸಲು ಉಚಿತ ರೈಲು ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಎಐಯುಟಿಯುಸಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಭಾಗಣ್ಣ ಬುಕ್ಕಾ, ವಾಡಿ ಸ್ಥಳೀಯ ಸಂಚಾಲಕ ಶರಣು ಹೇರೂರ್, ಸಾಯಿನಾಥ ಚಿಟ್ಟೆಲ್ಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details