ಕಲಬುರಗಿ: ಹೈದ್ರಾಬಾದ್ ಕರ್ನಾಟಕದ ಜನರ ವಿಮಾನ ಹಾರಾಟದ ಕನಸು ನನಸಾಗುವ ಕಾಲ ಬಂದಿದೆ. ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದು ಏರ್ಪೋರ್ಟ್ ವಾಣಿಜ್ಯ ವ್ಯವಹಾರಗಳ ಉದ್ಘಾಟನೆ ನಡೆಯಬಹುದೆಂಬ ಮಾತುಗಳು ಕೇಳಿಬರುತ್ತಿವೆ.
ಶೀಘ್ರದಲ್ಲೇ ಹೈದ್ರಾಬಾದ್ ಕರ್ನಾಟಕದ ಜನರ ವಿಮಾನ ಹಾರಾಟದ ಕನಸು ನನಸು! - ಭಾರತೀಯ ವಿಮಾನಯಾನ ಪ್ರಾಧಿಕಾರ
ಶೀಘ್ರದಲ್ಲೇ ಹೈದ್ರಾಬಾದ್ ಕರ್ನಾಟಕದ ಜನರ ವಿಮಾನ ಹಾರಾಟದ ಕನಸು ನನಸಾಗಲಿದೆ. ಇನ್ನೆರಡು ತಿಂಗಳಲ್ಲಿ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.
ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ಒಪ್ಪಂದವನ್ನು ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.
ಮೊದಲಿಗೆ ಕಲಬುರಗಿ-ಬೆಂಗಳೂರು ಮಧ್ಯೆ ಮತ್ತು ಕಲಬುರಗಿ-ತಿರುಪತಿ ಮಧ್ಯೆ ವಿಮಾನ ಹಾರಾಟ ನಡೆಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ 3.o ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಚರಣೆಗೆ ಆಯ್ಕೆಯಾಗಿದ್ದು, ಅಲಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನಕ್ಕೆ ಹಸಿರು ನಿಶಾನೆ ದೊರೆತಿದೆ.