ಕಲಬುರಗಿ: ಮಾರಕಾಸ್ತ್ರಗಳಿಂದ ಯುವಕನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದು ನಾಲೆಯೊಳಗೆ ಬಿಸಾಕಿ ಹೋಗಿರುವ ಘಟನೆ ಕಮಲಾಪೂರ ತಾಲೂಕಿನ ಡೊಂಗರಗಾಂವ ಬಳಿ ನಡೆದಿದೆ.
ಕತ್ತುಕೊಯ್ದು ಯುವಕನ ಬರ್ಬರ ಹತ್ಯೆ.. ರಸ್ತೆ ಬದಿಯ ನಾಲೆಯಲ್ಲಿ ಶವ ಪತ್ತೆ - ಮಾರಕಾಸ್ತ್ರಗಳಿಂದ ಯುವಕನ ಕೊಲೆ
ಯುವಕನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದು ಬಿಸಾಕಿ ಹೋಗಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ ಡೊಂಗರಗಾಂವ ಬಳಿ ನಡೆದಿದೆ.
ಕತ್ತುಕೊಯ್ದು ಯುವಕನ ಬರ್ಬರ ಹತ್ಯೆ: ರಸ್ತೆ ಬದಿಯ ನಾಲೆಯಲ್ಲಿ ಶವ ಪತ್ತೆ
ಅಂದಾಜು 25 ವರ್ಷದ ಯುವಕನ ಶವ ಇದಾಗಿದ್ದು, ಕೊಲೆಯಾದ ಯುವಕ ಯಾರೆಂದು ಪತ್ತೆಯಾಗಿಲ್ಲ. ಹಂತಕರು ರಾತ್ರಿ ಮಾರಕಾಸ್ತ್ರಗಳಿಂದ ಕತ್ತುಕೊಯ್ದು ರಸ್ತೆ ಬದಿಯ ನಾಲೆಯಲ್ಲಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಗ್ರಾಮೀಣ ಡಿವೈಎಸ್ಪಿ ಎಸ್ ಎಸ್ ಹುಲ್ಲೂರ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಕೊಲೆಯಾದ ಯುವಕನ ಕುರಿತು ಪತ್ತೆ ಮಾಡಲಾಗುತ್ತಿದೆ. ಜೊತೆಗೆ ಕೊಲೆಗಡುಕರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಕಮಲಾಪೂರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.