ಕರ್ನಾಟಕ

karnataka

ETV Bharat / state

ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಸಿಎಂ : ಸಚಿವೆ ಶಶಿಕಲಾ ಜೊಲ್ಲೆ - ಬಿಜೆಪಿ ನಾಯಕತ್ವ ಬದಲಾವಣೆ

ಶಾಸಕ ಅರವಿಂದ ಬೆಲ್ಲದ್ ದೆಹಲಿ ಭೇಟಿ ನನಗೆ ಗೊತ್ತಿಲ್ಲ. ಈ ಕುರಿತಂತೆ ಅವರೇ ಹೇಳಿಕೆ ನೀಡಿದ್ದಾರೆ. ಕಳೆದ 15 ದಿನಗಳಿಂದ ನಾನು ರಾಜ್ಯದ ಪ್ರವಾಸದಲ್ಲಿದ್ದೇನೆ. ಮನೆಯ ಹಿರಿಯರು ಪಕ್ಷದಲ್ಲಿನ ಭಿನ್ನಾಭಿಪ್ರಾಯ ಸರಿ ಮಾಡುತ್ತಾರೆ..

yadiyurappa will be the cm for next two year
ಸಚಿವೆ ಶಶಿಕಲಾ ಜೊಲ್ಲೆ

By

Published : Jun 15, 2021, 9:37 PM IST

ಹಾವೇರಿ :ಯಡಿಯೂರಪ್ಪನವರು ಮುಂದಿನ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಮುಂದಿನ ಚುನಾವಣೆಯನ್ನೂ ಸಹ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ. ಮನೆ ಎಂದ ಮೇಲೆ ಭಿನ್ನಾಭಿಪ್ರಾಯ, ವೈಮನಸ್ಸಗಳಿರುವುದು ಸಹಜ. ಇದನ್ನ ರಾಜ್ಯದ ಮೇಲುಸ್ತುವಾರಿಗಳು ನೋಡಿಕೊಳ್ಳುತ್ತಾರೆ. ಎಲ್ಲ ಸರಿ ಮಾಡುತ್ತಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ನಾಯಕತ್ವ ಬದಲಾವಣೆ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ..

ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಅನೇಕ ಚಾಲೆಂಜ್‌ಗಳನ್ನ ಎದುರಿಸಿದ್ದಾರೆ. ಬರಗಾಲ, ನೆರೆ ಮತ್ತು ಸತತ ಎರಡು ವರ್ಷದಿಂದ ಕೋವಿಡ್ ಸಮಸ್ಯೆಯನ್ನ ಯಡಿಯೂರಪ್ಪನವರು ಸಮರ್ಪಕವಾಗಿ ನಿಭಾಯಿಸಿದ್ದಾರೆ. ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯಂತಹ ವಿಷಯಗಳು ಚರ್ಚೆಗೆ ಬರಬಾರದಾಗಿತ್ತು, ಆದರೂ ಬಂದಿವೆ. ರಾಜ್ಯದ ಮೇಲುಸ್ತುವಾರಿಗಳು ಇದನ್ನೆಲ್ಲ ಸರಿಪಡಿಸುತ್ತಾರೆ ಎಂದು ಸಚಿವೆ ಜೊಲ್ಲೆ ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ್ ದೆಹಲಿ ಭೇಟಿ ನನಗೆ ಗೊತ್ತಿಲ್ಲ. ಈ ಕುರಿತಂತೆ ಅವರೇ ಹೇಳಿಕೆ ನೀಡಿದ್ದಾರೆ. ಕಳೆದ 15 ದಿನಗಳಿಂದ ನಾನು ರಾಜ್ಯದ ಪ್ರವಾಸದಲ್ಲಿದ್ದೇನೆ. ಮನೆಯ ಹಿರಿಯರು ಪಕ್ಷದಲ್ಲಿನ ಭಿನ್ನಾಭಿಪ್ರಾಯ ಸರಿ ಮಾಡುತ್ತಾರೆ ಎಂದರು. ಒಂದು ಕಡೆ ಶೈಕ್ಷಣಿಕ ವರ್ಷ ಹಾಳಾಗುತ್ತಿದೆ. ಮತ್ತೊಂದು ಕಡೆ ಮಕ್ಕಳು ಶಾಲೆಗೆ ಬಂದರೆ ಕೊರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ, ಎಸ್ಎಸ್ಎಲ್​ಸಿ ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವರು, ತಜ್ಞರ ಸಲಹೆ ಪಡೆದು ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಜೊಲ್ಲೆ ತಿಳಿಸಿದರು.

ABOUT THE AUTHOR

...view details