ಹಾವೇರಿ: ಸರ್ಕಾರಿ ವೈದ್ಯನ ಹಣದ ದಾಹಕ್ಕೆ ಗರ್ಭಕೋಶ ಕಳೆದುಕೊಂಡ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ಇದೀಗ ಮತ್ತೆ ಸಿಎಂ ಮನೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕುರಿತಂತೆ ರಾಣೆಬೆನ್ನೂರಲ್ಲಿ ಸಭೆ ನಡೆಸಿದ ಮಹಿಳೆಯರು ಬರುವ ತಿಂಗಳು 17 ರಂದು ಸಿಎಂ ಶಿಗ್ಗಾಂವಿ ನಿವಾಸಕ್ಕೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ರಾಣೆಬೆನ್ನೂರು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಪಿ ಶಾಂತ ತಾಲೂಕಿನ ಸುಮಾರು 15 ನೂರಕ್ಕೂ ಅಧಿಕ ಮಹಿಳೆಯರ ಗರ್ಭಕೋಶ ಕತ್ತರಿಸಿ ಹಾಕಿದ್ದ. ಕಾರಣವಿಲ್ಲದೇ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಆರೋಗ್ಯದ ಹಲವು ಸಮಸ್ಯೆಗಳಿಗೆ ತುತ್ತಾಗಿದ್ದರು. ತಮಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಮಹಿಳೆಯರು ವಿವಿಧ ಸಂಘಟನೆಗಳ ಬೆಂಬಲದ ಮೇಲೆ ಪ್ರತಿಭಟನೆ ನಡೆಸಿದ್ದರು.