ಕರ್ನಾಟಕ

karnataka

ETV Bharat / state

'ವಿನಯ್ ಕುಲಕರ್ಣಿ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ' - ಕರ್ನಾಟಕ ವಿಧಾನ ಸಭೆ ಚುನಾವಣೆ

ವಿನಯ್​ ಕುಲಕರ್ಣಿ ಅವರೇ ಬಹುತೇಕ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ- ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ.

Ex MLA Ajjampir Khadri
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ

By

Published : Mar 31, 2023, 1:10 PM IST

ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ

ಹಾವೇರಿ:ನಾನು ಹಾಗೂ ವಿನಯ್​ ಕುಲಕರ್ಣಿ ಭೇಟಿ ಮಾಡಿದ್ದೇವೆ. ಅವರೇ ಬಹುತೇಕ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಇದರ ಸಾಧಕ ಬಾಧಕಗಳ ಕುರಿತಂತೆ ಚರ್ಚೆ ಮಾಡಿದ್ದೇವೆ. ಪ್ರತಿ ಬೂತ್​​ನಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದರು.

ಶಿಗ್ಗಾಂವಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಈಗಾಗಲೇ ನಾಲ್ಕು ಭಾರಿ ಟಿಕೆಟ್ ಕೊಟ್ಟಿದಾರೆ. ಮತ್ತೊಮ್ಮೆ ಕೊಡೊದಾದರೆ ಕೊಡಿ ಎಂದಿದ್ದೇನೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸ್ಪರ್ಧೆಗೆ ಬಂದರೆ ಇನ್ನಷ್ಟು ಚೆನ್ನಾಗಿ ಆಗುತ್ತದೆ. ನಮಗೆ ಕಾಂಗ್ರೆಸ್ ರಾಜ್ಯದಲ್ಲಿ ಗೆಲ್ಲಬೇಕು. ಸಿಎಂ ಬೊಮ್ಮಾಯಿ ಸೋಲಬೇಕು ಎನ್ನುವುದು ನಮ್ಮ ಗುರಿ ಎಂದು ಹೇಳಿದರು.

ವಿನಯ್​ ಕುಲಕರ್ಣಿ ಅವರೇ ಶಿಗ್ಗಾಂವಿಯಲ್ಲಿ ಸ್ಫರ್ಧಿಸುತ್ತಾರೆ. ನಮಗೂ ವಾಸನೆ ಕಂಡು ಬಂದಿದೆ. ಪೆನ್ನು ಹಾಳೆ ತಗೊಂಡು ಬರಕೊಂಡು ಮಾತಾಡಿದ್ದೇವೆ ಎಂದರೆ ನೀವೇ ಯೋಚಿಸಿ ಅವರು ಬರೋದಕ್ಕೆ ಒಪ್ಪಿದಾರೆ. ಪ್ರತಿ ಬೂತ್​ ಮಟ್ಟದಲ್ಲೂ ಏನೇನೂ ಆಗಬೇಕು ಎಂದು ಚರ್ಚೆ ಮಾಡಿದ್ದೇವೆ. ಇದರಿಂದ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲಿಸುವ 15 ವರ್ಷದ ನನ್ನ ಕನಸು ನನಸಾಗಲಿದೆ ಎಂದು ಖಾದ್ರಿ ತಿಳಿಸಿದರು.

ಸಲೀಂ ಅಹ್ಮದ್​ ಅವರಿಗೆ ನಿಲ್ಲುವಂತೆ ಕೇಳಿದ್ವಿ. ಆದರೆ ಅವರು ಹೆಚ್ಚು ಆಸಕ್ತಿ ತೋರಿಸಲಿಲ್ಲ. ಆದರೆ ಕುಲಕರ್ಣಿ ಪ್ರತಿ ಬೂತ್​ನ ಮಾಹಿತಿ ಕೇಳಿ ತಿಳಿದುಕೊಂಡಿದ್ದಾರೆ. ಇದರಿಂದ ಗೊತ್ತಾಗುತ್ತದೆ ಅವರು ಸ್ಪರ್ಧೆಗೆ ಸಿದ್ದರಾಗಿದ್ದಾರೆ ಎಂದು. ಪಕ್ಷ ನನಗೆ ಯಾವುದೇ ಆಮಿಷ ನೀಡಿಲ್ಲ. ಪಕ್ಷ ನನಗೆ ಸಾಂವಿಧಾನಿಕ‌ ಹುದ್ದೆ ನೀಡಿದರು ನಿಭಾಯಿಸುತ್ತೇನೆ ಎಂದರು.

ಮಾಜಿ ಶಾಸಕರು, ಸಂಸದರು ಆಗಿದ್ದ ಮಂಜುನಾಥ್ ಕುನ್ನೂರು ನಮ್ಮ ಪಕ್ಷಕ್ಕೆ ಬಂದಿದಾರೆ. ನಮಗೂ ಒಳ್ಳೆಯದೆ. ಅವರು ಟಿಕೆಟ್​ಗಾಗಿ ಅರ್ಜಿ ಹಾಕಿಲ್ಲ. ಅವರಿಗೆ ಟಿಕೆಟ್ ಕೊಡುತ್ತಾರೆ ಅಂತಾ ನಂಗೆ ಅನಿಸುವುದಿಲ್ಲ. ವಿನಯ್​ ಕುಲಕರ್ಣಿ ಈಗಾಗಲೇ ಧಾರವಾಡಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನ ಶಿಗ್ಗಾಂವಿಗೆ ವರ್ಗಾಯಿಸುವಂತೆ ಹೇಳಿದ್ದೇವೆ‌. ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಲ್ಲಿ ನನಗೆ ಅಲ್ಪಸಂಖ್ಯಾತರು ಮತ ಹಾಕುತ್ತಾರೆ ಎಂದಿದ್ದಾರೆ. ಆದರೆ ಅದು ತಪ್ಪು. ಈ ಭಾರಿ ಅಲ್ಪಸಂಖ್ಯಾತರ ಬಹುತೇಕ ಮತಗಳು ಕಾಂಗ್ರೆಸ್​​ಗೆ ಬೀಳಲಿವೆ ಎಂದು ಖಾದ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿನಯ್​ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆ ವಿಚಾರ: ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ದೇನು?

ABOUT THE AUTHOR

...view details