ಹಾನಗಲ್:ತನ್ನ ಕ್ಯಾನ್ಸರ್ ಪೀಡಿತ ಪತ್ನಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಲಾರದೆ ಪರದಾಡ್ತಿದ್ದವರಿಗೆ ಗ್ರಾಮಸ್ಥರು ಸಹಾಯಹಸ್ತ ಚಾಚಿದ್ದಾರೆ.
ಕ್ಯಾನ್ಸರ್ ಪೀಡಿತ ಪತ್ನಿಗೆ ಆಸ್ಪತ್ರೆಗೆ ಹೋಗಲು ಗ್ರಾಮಸ್ಥರ ಸಹಾಯ: ಇದು ಈಟಿವಿ ಭಾರತ ವರದಿ ಪರಿಣಾಮ - hanagal latest news
ಹನುಮಾಪುರ ಗ್ರಾಮದ ನಾಗಪ್ಪ ಶೃಂಗೇರಿ ತನ್ನ ಕ್ಯಾನ್ಸರ್ ಪೀಡಿತ ಪತ್ನಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಲಾರದೆ ಪರದಾಡುತ್ತಿದ್ದು, ಸದ್ಯ ಕೆಲ ಗ್ರಾಮಸ್ಥರು ಇವರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಆಸ್ಪತ್ರೆಗೆ ಹೋಗಲು ಗ್ರಾಮಸ್ಥರ ಸಹಾಯಹಸ್ತ...ಈಟಿವಿ ಭಾರತ ಫಲಶೃತಿ
ತಾಲೂಕಿನ ಹನುಮಾಪುರ ಗ್ರಾಮದ ನಾಗಪ್ಪ ಶೃಂಗೇರಿ ಅವರಿಗೆ ಅಕ್ಕಿ ಆಲೂರ ಗ್ರಾಮದ ಗೀತಾ ರಾಜು ಅಂಕಸಾಲಿ (ಗೌಳಿ), ಮನೋಜ ದೇಸಾಯಿ, ಶಿವಾನಂದ ಗೌರಕ್ಕನವರ, ಶ್ರೀಧರ ಹೂಗಾರ ಸೇರಿದಂತೆ ಹಲವರು ನೆರವು ನೀಡಿದ್ದಾರೆ. ರೋಗಿಗೆ ಔಷಧಿ ಖರೀದಿಸಲು ಧನ ಸಹಾಯದ ಜೊತೆಗೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿ ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಇದನ್ನೂ ಓದಿ: ಪತ್ನಿಗೆ ಕ್ಯಾನ್ಸರ್... ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದೆ ಪರಿತಪಿಸುತ್ತಿರುವ ವೃದ್ಧ