ರಾಣೆಬೆನ್ನೂರು :ಕೊರೊನಾ ವೈರಸ್ ತಡೆಗೆ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಯುವಕರು ವಿಭಿನ್ನ ಪರಿಹಾರ ಕಂಡುಕೊಂಡಿದ್ದಾರೆ. ತಮ್ಮ ಗ್ರಾಮದಲ್ಲಿ ಚೆಕ್‌ಪೋಸ್ಟ್‌ಗಳನ್ನ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಮೇಡ್ಲೇರಿ ಗ್ರಾಮಕ್ಕೆ ಹೋಗುವವರು ಮತ್ತು ಬರುವವರನ್ನು ಕೊರೊನಾ ವೈರಸ್ ಬಗ್ಗೆ ಪರಿಶೀಲನೆ ಮಾಡಿ ಬಿಡುತ್ತಿದ್ದಾರೆ.
ಜಾಗೃತಿವಾಗಿದೆ ಕೊರೊನಾ ಸೈನಿಕರ ಪಡೆ.. ಮೇಡ್ಲೇರಿಯಲ್ಲಿ 6 ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ಪಹರೆ.. - ಗ್ರಾಮಸ್ಥರಿಂದ ಚೆಕ್ ಪೋಸ್ಟ್
ಸುಮಾರು 20 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ತಾಲೂಕಿನ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಊರಿಗೆ ಯಾರು ಬಂದು ಹೋಗುತ್ತಾರೆ ಎಂಬುದು ಮೊದಲು ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಗ್ರಾಮದ ಆರು ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ಯುವಕರೇ ಅಧಿಕಾರಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇದಕ್ಕೆ ಯುವಕರು ಕೊರೊನಾ ಸೈನಿಕರ ಪಡೆ ಎಂದು ಹೆಸರಿಟ್ಟುಕೊಂಡಿದ್ದಾರೆ. ತಲಾ ಒಂದೊಂದು ಗುಂಪು 8 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ತಿಳಿಸಿದರು. ಈ ಕಾರ್ಯಕ್ಕೆ ತಾಲೂಕು ಆರೋಗ್ಯ ಮತ್ತು ಕಂದಾಯ ಅಧಿಕಾರಿಗಳು ಕೂಡ ಕೈಜೋಡಿಸಿದ್ದಾರೆ. ಕೊರೊನಾ ವೈರಸ್ ಹತೋಟಿ ಮತ್ತು ಆ ಬಗ್ಗೆ ಜನರಿಗೆ ಯುವಕರು ತಾವೇ ಜಾಗೃತಿ ನೀಡುತ್ತಿರುವುದು ವಿಶೇಷ.