ಹಾವೇರಿ/ಹಾನಗಲ್: ಕೊರೊನಾ ನಿಯಂತ್ರಿಸಲು ತಾಲೂಕಿನ ಸಂಗೂರನ್ನು ಗ್ರಾಮಸ್ಥರೇ 15 ದಿನಗಳವರೆಗೆ ಸ್ವಯಂ ಘೋಷಿತ ಲಾಕ್ಡೌನ್ ಮಾಡಿದ್ದಾರೆ.
ಕೊರೊನಾ ನಿಯಂತ್ರಿಸಲು ಈ ಗ್ರಾಮದಲ್ಲಿ 15 ದಿನ ಸ್ವಯಂ ಘೋಷಿತ ಲಾಕ್ಡೌನ್ - corona
ಕೊರೊನಾ ನಿಯಂತ್ರಿಸಲು ಹಾವೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸ್ಥಳೀಯರೇ 15 ದಿನಗಳವರೆಗೆ ಸ್ವಯಂ ಘೋಷಿತ ಲಾಕ್ಡೌನ್ ಮಾಡಿದ್ದಾರೆ.
ಗ್ರಾಮ 15 ದಿನ ಸ್ವಯಂ ಘೋಷಿತ ಲಾಕ್ಡೌನ್
ಗ್ರಾಮದ ಅಂಗಡಿ ಮುಂಗಟ್ಟುಗಳನ್ನ ವ್ಯಾಪಾರಸ್ಥರು ಬಂದ್ ಮಾಡುವ ಮೂಲಕ ಲಾಕ್ಡೌನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಈ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು.
ಆದ್ದರಿಂದ ಈ ಗ್ರಾಮಸ್ಥರು ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಇಡೀ ಗ್ರಾಮವನ್ನೇ ಲಾಕ್ಡೌನ್ ಮಾಡಿ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ.