ಕರ್ನಾಟಕ

karnataka

ಹಾವೇರಿಯಲ್ಲಿ ಸಾರಿಗೆ ಬಸ್​ ಆರಂಭ: ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

By

Published : May 6, 2020, 5:30 PM IST

ಹಾವೇರಿಯಲ್ಲಿ ಸಾರಿಗೆ ಬಸ್​ ಆರಂಭವಾಗಿದ್ದು ಮೂರನೇಯ ದಿನವಾದ ಇಂದು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಿಂದ ಸಾರಿಗೆ ಇಲಾಖೆ ಸಿಬ್ಬಂದಿಯಲ್ಲಿ ಖುಷಿ ತಂದಿದೆ.

Transport bus start in Haveri
ಹಾವೇರಿಯಲ್ಲಿ ಸಾರಿಗೆ ಬಸ್​ ಆರಂಭ

ಹಾವೇರಿ: ಲಾಕ್​​​ಡೌನ್ ಸಡಿಲಿಕೆಯ ನಂತರ ಜಿಲ್ಲೆಯಲ್ಲಿ ಬಸ್ ಸೇವೆ ಆರಂಭಗೊಂಡಿದ್ದು ಪ್ರಯಾಣಿಕರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ದಿನ ನಿರೀಕ್ಷಿಸಿದ ಪ್ರಮಾಣದಲ್ಲಿ ಪ್ರಯಾಣಿಕರು ಬಂದಿರಲಿಲ್ಲ. ಆದರೆ, ಮೂರನೇ ದಿನವಾದ ಇಂದು ಪ್ರಯಾಣಿಕರ ಪ್ರಮಾಣ ಹೆಚ್ಚಾಗಿತ್ತು.

ಹಾವೇರಿಯಲ್ಲಿ ಸಾರಿಗೆ ಬಸ್​ ಆರಂಭ

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆ ಒಂದು ಬಸ್​ನಲ್ಲಿ 21 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು ಬಸ್ ಹತ್ತುವ ಮುನ್ನ ಪ್ರಯಾಣಿಕರು ಕಡ್ಡಾಯವಾಗಿ ಸ್ಯಾನಿಟೈಜರ್​ ಬಳಸುತ್ತಿದ್ದಾರೆ. ಬಸ್​​ಗಳಲ್ಲಿ ಮಾಸ್ಕ್​​ ಧರಿಸಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿರುವುದಕ್ಕೆ ಸಾರಿಗೆ ಸಿಬ್ಬಂದಿಯಲ್ಲಿ ಖುಷಿ ತಂದಿದೆ.

ಹಾವೇರಿಯಲ್ಲಿ ಸಾರಿಗೆ ಬಸ್​ ಆರಂಭ

ABOUT THE AUTHOR

...view details