ಹಾವೇರಿ:ಜಿಲ್ಲೆಯಲ್ಲಿ 3 ಕೊರೊನಾ ಪ್ರಕರಣಗಳು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ತಾಲೂಕು ಕೇಂದ್ರ ಸಂಪರ್ಕಿಸುವ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಬಿಗಿ ಬಂದೊಬಸ್ತ್ ಕೈಗೊಳ್ಳಲಾಗಿದೆ.
ಕೊರೊನಾಗೆ ಕಂಗಾಲಾದ ಹಾವೇರಿ: ಜಿಲ್ಲೆಯಾದ್ಯಂತ ಪೊಲೀಸ್ ನಾಕಾಬಂದಿ - ಕೊರೊನಾ ಲೆಟೆಸ್ಟ್ ನ್ಯೂಸ್
ಕೊರೊನಾ ಭೀತಿ ಹಿನ್ನೆಲೆ ಜನರ ಸುರಕ್ಷೆತೆಯ ದೃಷ್ಟಿಯಿಂದ ಲಾಕ್ಡೌನ್ ಜಾರಿ ಮಾಡಿದ್ದರೂ ಸಹ ಜನತೆ ಮಾತ್ರ ನಿಯಮ ಉಲ್ಲಂಘಿಸಿ ಓಡಾಡುತ್ತಿರುವುದು ವರದಿಯಾಗುತ್ತಿದೆ. ಹಾಗಾಗಿ ಹಾವೇರಿಯ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಿ ನಗರದೊಳಗೆ ಆಗಮಿಸುವ ವಾಹನಗಳನ್ನು ಸಂಪೂರ್ಣ ತಪಾಸಣೆ ಮಾಡಲಾಗುತ್ತಿದೆ.
ಕೊರೊನಾಗೆ ಕಂಗಾಲಾದ ಹಾವೇರಿ: ಜಿಲ್ಲೆಯಾದ್ಯಂತ ಪೊಲೀಸ್ ನಾಕಾಬಂದಿ
ನಗರಕ್ಕೆ ಬರುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಾಹನ ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿದೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.
ಅಲ್ಲದೆ ಬೈಕ್ ಮತ್ತು ಕಾರ್‌ಗಳಲ್ಲಿ ಸಮಾಜಿಕ ಅಂತರವಿದೆಯಾ ಎಂಬುದನ್ನ ಸಹ ಚೆಕ್ ಮಾಡಲಾಗುತ್ತಿದೆ. ಮಾಸ್ಕ್ ಹಾಕದೇ ಸಂಚರಿಸಿದರೆ ದಂಡ ವಿಧಿಸಲಾಗುತ್ತಿದೆ.