ಹಾವೇರಿ:ಕೇಂದ್ರ ಸರ್ಕಾರ ಸಿಎಂ ಯಡಿಯೂಪ್ಪರನ್ನ ಸ್ವತಂತ್ರವಾಗಿ ಬಿಟ್ಟಿಲ್ಲ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಬಿಎಸ್ವೈ ಅವರನ್ನ ಸ್ವತಂತ್ರವಾಗಿ ಬಿಟ್ಟಿಲ್ಲ: ಕೆಜೆಪಿ ರಾಜ್ಯಾಧ್ಯಕ್ಷ
ಕೇಂದ್ರ ಸರ್ಕಾರ ಸಿಎಂ ಯಡಿಯೂಪ್ಪಗೆ ಅವರನ್ನ ಸ್ವತಂತ್ರವಾಗಿ ಬಿಟ್ಟಿಲ್ಲ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಗೂ ನಮಗೂ ಸಂಬಂಧವಿಲ್ಲ. ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ. ಆದರೆ, ಯಡಿಯೂರಪ್ಪ ಅಧಿಕಾರ ನಡೆಸಲು ಕೇಂದ್ರದವರು ಸ್ವತಂತ್ರವಾಗಿ ಬಿಡಬೇಕು. ಇಲ್ಲದಿದ್ದರೆ ಹೋರಾಟ ಮಾಡೋದಾಗಿ ತಿಳಿಸಿದ್ರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿಯಾಗಿಲ್ಲ. ಸರ್ಕಾರ ವರ್ಗಾವಣೆ ದಂಧೆಯಲ್ಲಿ ಬ್ಯುಸಿಯಾಗಿದ್ದು, ಬಿಎಸ್ವೈ ಅವರಿಗೆ ಜನರ ಸಮಸ್ಯೆ ಕೇಳಲು ಆಗುತ್ತಿಲ್ಲ ಎಂದರು.
ಅಲ್ಲದೇ, ದಿನದಿಂದ ದಿನಕ್ಕೆ ರಾಜ್ಯದ ಜನರ ಸಮಸ್ಯೆಗಳು ಅಧಿಕವಾಗುತ್ತಿವೆ. ನೆರೆ ಸಂತ್ರಸ್ತರಿಗೆ ಸ್ಪಂದಿಸದ ಯಡಿಯೂರಪ್ಪ, ಮಹಾರಾಷ್ಟ್ರ ರಾಜಕೀಯ ಪ್ರಚಾರಕ್ಕೆ ಹೋಗುವ ಮೂಲಕ ಸಂತ್ರಸ್ತರನ್ನ ಕಡೆಗಣಿಸಿದ್ದಾರೆ. ಸರ್ಕಾರ ಇನ್ನೂ ಟೇಕ್ ಆಫ್ ಆಗುತ್ತಿಲ್ಲ. ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಹೋರಾಟ ಮಾಡೋದಾಗಿ ಹೇಳಿದ್ರು.