ರಾಣೆಬೆನ್ನೂರು: ಕುಷ್ಠರೋಗಿಯೊಬ್ಬರಿಗೆ ಮನೆ ಕಟ್ಟಿಕೊಟ್ಟು ಆರೋಗ್ಯ ಕಾಪಾಡಿಕೊಳ್ಳುವಂತೆ ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಮಾದರಿ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಕುಷ್ಠರೋಗಿಗೆ ಮನೆ ಕಟ್ಟಿಸಿ ಕೊಟ್ಟ ಸ್ವಾಮೀಜಿ!
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಕುಷ್ಠರೋಗಿ ಹಾಗೂ ಆತನ ಪತ್ನಿಗೆ ಇರಲು ಪ್ರಣವಾನಂದ ಸ್ವಾಮೀಜಿ ಮನೆ ನಿರ್ಮಿಸಿಕೊಡುತ್ತಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಗುಡ್ಡಪ್ಪ ಬೇವಿನಮರದ ಮತ್ತು ರೇಣುಕವ್ವ ಎಂಬ ದಂಪತಿ ನಿವಾಸವಿಲ್ಲದೆ ಅಲೆದಾಡುತ್ತಿದ್ದರು. ಗುಡ್ಡಪ್ಪ ಕುಷ್ಠರೋಗದಿಂದ ಬಳಲುತ್ತಿದ್ದ. ಭಿಕ್ಷಾಟಣೆಯಿಂದಲೇ ಹೊಟ್ಟೆ ತುಂಬಿಸಿಕೊಂಡು ಜೀವನ ನಡೆಸುತ್ತಿದ್ದ ದಂಪತಿಗೆ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿರಲಿಲ್ಲ.
ಸುಮಾರು 9×11 ಅಳತೆಯಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ಸುಮಾರು 60 ಸಾವಿರ ರೂಪಾಯಿ ಹಣವನ್ನು ಸ್ವಾಮೀಜಿ ನೀಡಿದ್ದಾರೆ. ವಾರದ ಒಳಗಾಗಿ ಸಂಪೂರ್ಣವಾಗಿ ಮನೆ ನಿರ್ಮಾಣವಾಗಲಿದೆ. ನಂತರ ಬಡ ದಂಪತಿಗೆ ಹಸ್ತಾಂತರಿಸಲಾಗುತ್ತದೆ ಎಂದರು. ಕುಷ್ಠರೋಗ ಬಂದಿದ್ದರಿಂದ ಗ್ರಾಮ ಪಂಚಾಯಿತಿ ಇವರನ್ನು ಗ್ರಾಮದಿಂದಲೇ ಹೊರಗೆ ಇಟ್ಟಿತ್ತು ಎಂದು ಆರೋಪಿಸಲಾಗಿದೆ.